ದೇಶಪ್ರಮುಖ ಸುದ್ದಿಮನರಂಜನೆ

ಅಶ್ಲೀಲ ಚಲನಚಿತ್ರಗಳನ್ನು ಮಾಡಿದ ಆರೋಪ   :  ಬಾಲಿವುಡ್ ನಟಿ  ಶಿಲ್ಪಾ ಶೆಟ್ಟಿ  ಪತಿ ,ಉದ್ಯಮಿ ರಾಜ್ ಕುಂದ್ರಾ  ಬಂಧನ

ದೇಶ(ಮುಂಬೈ)ಜು.20:- ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಕ್ರೈಂ ಬ್ರಾಂಚ್  ಬಂಧಿಸಿದೆ.

ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಕೆಲವು ಆ್ಯಪ್‌ ಗಳಲ್ಲಿ ಪ್ರಕಟಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಅಶ್ಲೀಲ ಚಿತ್ರದ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ಫೆಬ್ರವರಿಯಲ್ಲಿ ಅಪರಾಧ ವಿಭಾಗವು ಪ್ರಕರಣ ದಾಖಲಿಸಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದೆ. ಅಶ್ಲೀಲ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಈ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ರಾಜ್ ಕುಂದ್ರಾ ಎಂದು ಮುಂಬೈ ಅಪರಾಧ ವಿಭಾಗ ಹೇಳಿದೆ.

ಯುಕೆ ನಲ್ಲಿ ನೋಂದಾಯಿಸಲ್ಪಟ್ಟ ಕೆಂಡ್ರೈನ್ ಎಂಬ ಕಂಪನಿಯು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುತ್ತಿತ್ತು. ಈ ಕಂಪನಿಯನ್ನು ರಾಜ್ ಕುಂದ್ರಾ ಅವರು ರಚಿಸಿದ್ದರು . ಸೈಬರ್ ಕಾನೂನಿನಿಂದ ಪಾರಾಗಲು ವಿದೇಶದಲ್ಲಿ ನೋಂದಾಯಿಸಿಕೊಂಡಿದ್ದರು. ರಾಜ್ ಕುಂದ್ರಾ ಅವರ ಕುಟುಂಬದ  ಸದಸ್ಯರೇ  ಈ ಕಂಪನಿಯ ನಿರ್ದೇಶಕರಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಕಂಪನಿಯು ಮುಂಬೈ ಅಥವಾ ಭಾರತದ ಬೇರೆಡೆ ಸರ್ವರ್‌ಗಳಲ್ಲಿ ಚಿತ್ರೀಕರಿಸಿದ ಅಶ್ಲೀಲ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿತ್ತು. ವಿ ಟ್ರಾನ್ಸ್‌ಫರ್ ಮೂಲಕ ವೀಡಿಯೊವನ್ನು ಇಲ್ಲಿಂದ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ.

ಅಪರಾಧ ವಿಭಾಗದ ಪ್ರಕಾರ  ರಾಜ್ ಕುಂದ್ರಾ ಈ ವ್ಯವಹಾರದಲ್ಲಿ 10 ಕೋಟಿ ರೂ.ತೊಡಗಿಸಿದ್ದು,   ಫೆಬ್ರವರಿಯಲ್ಲಿಯೇ ಕುಂದ್ರಾ ಅವರು ಕೆಂಡ್ರೈನ್  ಕಂಪನಿಯೊಂದಿಗೆ ಸಂಬಂಧ ಹೊಂದಿರುವುದು ಸ್ಪಷ್ಟವಾಗಿತ್ತು. ಆದರೆ ನೇರ ಸಂಪರ್ಕ ಹೊಂದಿದ್ದಾರಾ ಎಂಬ ಕುರಿತು ಅಪರಾಧ ವಿಭಾಗವು ತನಿಖೆಯಲ್ಲಿ ತೊಡಗಿತ್ತು. ವಾಸ್ತವವಾಗಿ  ಉಮೇಶ್ ಕಾಮತ್ ಎಂಬ ವ್ಯಕ್ತಿಯನ್ನು ಬಂಧಿಸಿದ ನಂತರ, ಅಪರಾಧ ವಿಭಾಗ ತನಿಖೆ ಮುಂದುವರಿಸಿತ್ತು. ಇಡೀ ವಿಷಯವನ್ನು  ಅಪರಾಧ ಶಾಖೆಯ ಮುಂದೆ ತೆರೆದದ್ದು ಅವರೇ. ಸಾಕ್ಷಿಯಲ್ಲಿ  8-10 ಕೋಟಿಗಳ ವಹಿವಾಟು ನಡೆದಿದೆ ಎಂದು ಅಪರಾಧ ವಿಭಾಗಕ್ಕೆ ತಿಳಿದುಬಂದಿದೆ. ಇದರ ನಂತರ    ಅಪರಾಧ ವಿಭಾಗವು ರಾಜ್ ಕುಂದ್ರಾ ಅವರನ್ನು ಕಚೇರಿಗೆ ಕರೆದು    ವಿಚಾರಣೆ ನಡೆಸಿದ ನಂತರ ಬಂಧಿಸಿದೆ ಎನ್ನಲಾಗಿದೆ.

ರಾಜ್ ಕುಂದ್ರಾ ಅವರನ್ನು ಇಂದು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.  ಈ ಪ್ರಕರಣದಲ್ಲಿ   ದೊಡ್ಡ ಹೆಸರುಗಳು ಭಾಗಿಯಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಜ್ ಕುಂದ್ರಾ ಅವರನ್ನೂ ಪ್ರಶ್ನಿಸಲಾಗುವುದು.   ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಅಪರಾಧ ವಿಭಾಗ ಹೇಳಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: