ದೇಶಪ್ರಮುಖ ಸುದ್ದಿಮನರಂಜನೆ

ಅಭಿಮಾನಿಗಳಿಗೆ ನಿರಾಶೆ : ನಟನೆ ತೊರೆದು ಸಾವಯವ ಕೃಷಿ ಪ್ರಾರಂಭಿಸಿದ ಶ್ರೀರಾಮ ಪಾತ್ರಧಾರಿ

ದೇಶ(ನವದೆಹಲಿ)ಜು.20:- ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಸಿಯಾ ಕೆ ರಾಮ್‌ ನಲ್ಲಿ ಶ್ರೀರಾಮ್ ಪಾತ್ರದಲ್ಲಿ ನಟಿಸಿದ್ದ ನಟ ಆಶಿಶ್ ಶರ್ಮಾ ಈಗ ನಟನಾ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಇದಲ್ಲದೆ ಅನೇಕ ಪ್ರಸಿದ್ಧ ಟಿವಿ ಕಾರ್ಯಕ್ರಮಗಳಲ್ಲಿ ಸ್ಮರಣೀಯ ಪಾತ್ರವನ್ನು ನಿರ್ವಹಿಸಿದ ಆಶಿಶ್ ಶರ್ಮಾ  ಈ ದಿನಗಳಲ್ಲಿ ಮುಂಬೈ ತೊರೆದು ತಮ್ಮ ಗ್ರಾಮದಲ್ಲಿ ನೆಲೆಸಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ತುಂಬಾ ನಿರಾಶೆಗೊಂಡಿದ್ದಾರೆ.

ಆಶಿಶ್ ತಮ್ಮ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಅವರು ‘ಪ್ರಕೃತಿ ಮಾತೆಗೆ ಹತ್ತಿರವಾಗಲು’ ಬಯಸುತ್ತಾರಂತೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಆಶಿಶ್  ನಾವು ಜೀವನದ ಸರಳ ಸಂತೋಷಗಳನ್ನು ಸಂಪೂರ್ಣವಾಗಿ ಮರೆತಿದ್ದೇವೆ ಎಂದು ಹೇಳಿದ್ದರು. ಅದೃಷ್ಟವಶಾತ್ ಈ ಸಾಂಕ್ರಾಮಿಕವು ನಮ್ಮನ್ನು ನಾವು ಅರಿತುಕೊಳ್ಳುವಂತೆ ಮಾಡಿದೆ.   ಜೀವನದಿಂದ ನಮಗೆ ಏನು ಬೇಕು ಎಂದು ಯೋಚಿಸಲು ಅವಕಾಶವನ್ನು ನೀಡಿದೆ. ಜೀವನದಲ್ಲಿ ಸಣ್ಣ ವಿಷಯಗಳು ಕೂಡ ಹೆಚ್ಚು ಸುಂದರವಾಗಿಸುತ್ತವೆ ಎಂಬುದನ್ನು ನಾನು ಅರಿತುಕೊಂಡೆ ಎಂದಿದ್ದಾರೆ.

ಕೊರೋನಾದಿಂದಾಗಿ ಜನರು ಕೆಲಸದ ಕಾರಣದಿಂದಾಗಿ ಅಸಮಾಧಾನಗೊಂಡಿದ್ದನ್ನು ನೋಡಿ, ನಾನು ಈಗ ನನ್ನ ಮೂಲಗಳಿಗೆ ಮರಳಲು ಬಯಸಲು ನಿರ್ಧರಿಸಿದೆ.   ನಾನು ಕೃಷಿಕನಾಗಲು ಬಯಸುತ್ತೇನೆ. ಕೃಷಿ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಮಾಡಿಕೊಂಡು ಬಂದ ವೃತ್ತಿಯಾಗಿದೆ, ಆದರೆ ನಾನು ಮುಂಬೈಗೆ ಹೋದ ನಂತರ ಅದರಿಂದ ದೂರ ಸರಿದಿದ್ದೆ.    ನಾನು ಹಿಂತಿರುಗಿ ಫಲಪ್ರದ ಜೀವನವನ್ನು ನಡೆಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಆಶಿಶ್‌ ಅವರದ್ದು ಗ್ರಾಮದಲ್ಲಿ 40 ಎಕರೆ ಜಮೀನು ಇದೆ. ಇದರೊಂದಿಗೆ  40 ಹಸುಗಳಿವೆ. ಅವರ ಫಾರ್ಮ್  ಜೈಪುರದ ಬಳಿ ಇದೆ. ಆರೋಗ್ಯಕರ ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಬೇಕು ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ಈಗ ಮಾತೆ ಪ್ರಕೃತಿಗೆ ಹತ್ತಿರವಾಗಲು ಬಯಸುತ್ತೇನೆ. ಅಲ್ಲದೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ಆಶಿಶ್ ಶೀಘ್ರದಲ್ಲೇ ಕರಣ್ ರಾಜದಾನ್ ಅವರ ‘ಹಿಂದುತ್ವ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: