ಮನರಂಜನೆಮೈಸೂರು

ಪುತ್ರನ ಹೆಸರಿನಲ್ಲಿ ಇಂಡಿಯನ್ ಲೆಫರ್ಡ್ ದತ್ತು ಸ್ವೀಕರಿಸಿದ ನಟ ರಿಷಬ್ ಶೆಟ್ಟಿ

ಮೈಸೂರು, ಜು.20:- ನಟ,ನಿರ್ದೇಶಕ ರಿಷಬ್ ಶೆಟ್ಟಿ ಪುತ್ರ ರಣವಿತ್ ಹೆಸರಿನಲ್ಲಿ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ದಲ್ಲಿ ಇಂಡಿಯನ್ ಲೆಫರ್ಡ್ ಒಂದನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀ ಕರಿಸಿದ್ದಾರೆ.
19ಜುಲೈ 2021ರಿಂದ 18ಜುಲೈ 2022ರ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೃಗಾಲಯ ದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪಕ್ಷಿ ಪ್ರಿಯರು ದತ್ತು ಸ್ವೀಕರಿಸುವಂತೆ ನೀಡಿದ ಕರೆಗೆ ಸಾಕಷ್ಟು ಮಂದಿ ದತ್ತು ಸ್ವೀಕರಿಸಿದ್ದು ಮೃಗಾಲಯಕ್ಕೆ ಕೋಟ್ಯಂತರ ರೂಪಾಯಿ ಹರಿದುಬಂದಿತ್ತು.
ಇತ್ತೀಚೆಗಷ್ಟೇ ನಟ ಉಪೇಂದ್ರ,ನಟಿ ಅಮೂಲ್ಯ ಕೂಡ ಪ್ರಾಣಿಗಳನ್ನು ದತ್ತು ಸ್ವೀಕ ರಿಸಿದ್ದರು. ಇದೀಗ ನಟ ರಿಷಬ್ ಶೆಟ್ಟಿ ಕೂಡ ತಮ್ಮ ಪುತ್ರನ ಹೆಸರಿನಲ್ಲಿ ಚಿರತೆ ಯನ್ನು ದತ್ತು ಸ್ವೀಕರಿಸಿ ದ್ದಾರೆ.
ಮೃಗಾಲಯದ ನಿರ್ದೇಶಕರು ಅವರನ್ನು ಅಭಿನಂದಿಸಿದ್ದಾರೆ.

Leave a Reply

comments

Related Articles

error: