ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ನಿನ್ನೆ 1,464 ಮಂದಿಯಲ್ಲಿ ಕೊರೊನಾ ಸೋಂಕು ದೃಢ; 29 ಮಂದಿ ಸಾವು

ಬೆಂಗಳೂರು,ಜು.21-ರಾಜ್ಯದಲ್ಲಿ ನಿನ್ನೆ 1,464 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದ್ದು, 29 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,86,702 ಕ್ಕೆ ತಲುಪಿದ್ದು, ಮೃತಪಟ್ಟವರ ಸಂಖ್ಯೆ 36,226ಕ್ಕೆ ಏರಿಕೆಯಾಗಿದೆ.

ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 26,256 ಕ್ಕೆ ಇಳಿಕೆಯಾಗಿದೆ. ನಿನ್ನೆ 2,706 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 28,24,197 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರ 352, ದಕ್ಷಿಣಕನ್ನಡ 200, ಮೈಸೂರು 117, ಹಾಸನ 108, ಚಿಕ್ಕಮಗಳೂರು 81, ತುಮಕೂರು 86, ಬೆಳಗಾವಿ 75, ಉಡುಪಿ 68, ಶಿವಮೊಗ್ಗ 63, ಕೊಡಗು 56, ಉತ್ತರಕನ್ನಡ 53, ಬೆಂಗಳೂರು ಗ್ರಾಮಾಂತರ 35, ಮಂಡ್ಯ 37, ಕೋಲಾರ 36, ಚಾಮರಾಜನಗರ 16, ಧಾರವಾಡ 14, ದಾವಣಗೆರೆ 13, ಚಿತ್ರದುರ್ಗ 11, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ ತಲಾ 8, ರಾಮನಗರ, ವಿಜಯಪುರ ತಲಾ 4, ಹಾವೇರಿ, ರಾಯಚೂರು ತಲಾ 3, ಬೀದರ್ 2, ಬಾಗಲಕೋಟೆ, ಗದಗ, ಯಾದಗಿರಿ ತಲಾ 1 ಸೋಂಕು ಪತ್ತೆಯಾಗಿದ್ದು, ಕೊಪ್ಪಳದಲ್ಲಿ ಸೋಂಕಿನ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. (ಎಂ.ಎನ್)

Leave a Reply

comments

Related Articles

error: