
ಮೈಸೂರು
ಕಾನೂನು ದರ್ಶನ ಅನುವಾದಿತ ಕೃತಿ ಬಿಡುಗಡೆ
ಮೈಸೂರು,ಜು.21:- ತ್ರಿವೇಣಿ ಸಿ ಅವರ ಅನುವಾದದಲ್ಲಿ ಮೂಡಿಬಂದ ಕೃತಿ’ ಕಾನೂನು ದರ್ಶನ’ವನ್ನು ಪತ್ರಕರ್ತರ ಭವನದಲ್ಲಿಂದು ಬಿಡುಗಡೆಗೊಳಿಸಲಾಯಿತು.
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಪದ್ಮಶೇಖರ್ ಅಧ್ಯಕ್ಷತೆಯಲ್ಲಿ ಕೃತಿ ಬಿಡುಗಡೆಗೊಳಿಸಲಾಗಿದ್ದು, ಕಾನೂನು ಸಲಹೆಗಾರರಾದ ಡಾ.ಎಂ.ಎನ್.ಭೀಮೇಶ್ ಕೃತಿಯ ಕುರಿತು ಮಾತನಾಡಿದರು.
ಶಾರದಾ ವಿಲಾಸ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೈ. ಪಿ. ಉದಯಕುಮಾರ ಹಾಗೂ ಅನುವಾದಕಿ ತ್ರಿವೇಣಿ ಸಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)