ದೇಶಪ್ರಮುಖ ಸುದ್ದಿ

ಮುಂದುವರಿದ ಕೊರೋನಾ  ಬಿಕ್ಕಟ್ಟು :  24 ಗಂಟೆಗಳಲ್ಲಿ 41 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ  

ದೇಶ(ನವದೆಹಲಿ)ಜು.22:- ಕೊರೋನಾ ಸಾಂಕ್ರಾಮಿಕದ ಬಿಕ್ಕಟ್ಟು ಭಾರತದಲ್ಲಿ ಮುಂದುವರೆದಿದೆ. ಮತ್ತೊಮ್ಮೆ 40 ಸಾವಿರಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.

ಆರೋಗ್ಯ ಸಚಿವಾಲಯ ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 41,383 ಹೊಸ ಕೊರೋನಾ ಪ್ರಕರಣಗಳು ಬಂದಿದ್ದು, 507 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಬುಧವಾರ 42,015 ಹೊಸ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಕಳೆದ 24 ಗಂಟೆಗಳಲ್ಲಿ 38,652 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.ಅಂದರೆ 2224 ಸಕ್ರಿಯ ಪ್ರಕರಣಗಳು  ಹೆಚ್ಚಾಗಿದೆ.

ದೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕಿಂತ ಹೆಚ್ಚು.  ಒಟ್ಟು 4 ಲಕ್ಷ 9 ಸಾವಿರ ಜನರು ಇನ್ನೂ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು  ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಆರಂಭದಿಂದಲೂ ಮೂರು ಕೋಟಿ 12 ಲಕ್ಷ 57 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4 ಲಕ್ಷ 18 ಸಾವಿರ 987 ಜನರು ಸಾವನ್ನಪ್ಪಿದ್ದಾರೆ.   3 ಕೋಟಿ 4 ಲಕ್ಷ 29 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಾರ  ಜುಲೈ 21 ರವರೆಗೆ ದೇಶಾದ್ಯಂತ 41 ಕೋಟಿ 78 ಲಕ್ಷ ಡೋಸ್ ಕೊರೋನಾ ಲಸಿಕೆ ನೀಡಲಾಗಿದೆ. ಕೊನೆಯ ದಿನ 22 ಲಕ್ಷ 77 ಸಾವಿರ ಲಸಿಕೆಗಳನ್ನು ನೀಡಲಾಯಿತು. ಅದೇ ವೇಳೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ  ಇದುವರೆಗೆ 45 ಕೋಟಿ 9 ಲಕ್ಷ ಕೊರೋನಾ ಪರೀಕ್ಷೆಗಳನ್ನು ಮಾಡಲಾಗಿದೆ. ಕೊನೆಯ ದಿನ 17.18 ಲಕ್ಷ ಕೊರೋನಾ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು  ಸಕಾರಾತ್ಮಕತೆ ಪ್ರಮಾಣವು ಶೇಕಡಾ 3 ಕ್ಕಿಂತ ಕಡಿಮೆಯಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: