ಮೈಸೂರು

ಪತ್ರಕರ್ತರ ಸೋಗಿನಲ್ಲಿ ಬಂದು ವೈದ್ಯರಿಗೆ ಹಣ ನೀಡುವಂತೆ ಬೆದರಿಕೆ : ದೂರು

ಮೈಸೂರು,ಜು.22:- ಪತ್ರಕರ್ತರ ಸೋಗಿನಲ್ಲಿ ಬಂದು ಕ್ಲಿನಿಕ್ ನಡೆಸುತ್ತಿರುವ ವೈದ್ಯರೋರ್ವರಿಗೆ ಮೂರು ಲಕ್ಷ ರೂ.ಹಣ ನೀಡುವಂತೆ ಬೆದರಿಕೆಯೊಡ್ಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಪತ್ರಕರ್ತರೆಂದು ಹೇಳಿಕೊಂಡ ಶ್ರೀನಿಧಿ ಮತ್ತು ಮಂಜುನಾಥ ಎಂಬವರು ಕೆ.ಆರ್.ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀಹರಿ ಹೆಲ್ತ್ ಕೇರ್ ಕ್ಲಿನಿಕ್ ನಡೆಸುತ್ತಿರುವ ಡಾ.ದೇಬಶೀಷ್ ಅವರಿಗೆ ಮೂರು ಲಕ್ಷರೂ. ಹಣ ನೀಡುವಂತೆ ಹೆದರಿಸಿದ್ದಾರೆ ಎನ್ನಲಾಗಿದ್ದು ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದೀರಿ, ನಿಮ್ಮ ಬಳಿ ಇರುವ ದಾಖಲಾತಿ ತೋರಿಸಿ, ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡುತ್ತೇವೆ ಎಂದು ಹೆದರಿಸಿದ ಇವರಿಬ್ಬರು ಮೂರು ಲಕ್ಷರೂ.ನೀಡಿದರೆ ಸುಮ್ಮನಿರುವುದಾಗಿ ಹೇಳಿದ್ದಾರೆ.

ಈ ಕುರಿತು ವೈದ್ಯರು ದೂರು ನೀಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: