ಕರ್ನಾಟಕಪ್ರಮುಖ ಸುದ್ದಿ

ಶೀಘ್ರದಲ್ಲೇ ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರು,ಸಿಬ್ಬಂದಿಗಳಿಗೆ ಲಸಿಕೆ : ಸಚಿವ  ಡಾ.ಕೆ.ಸುಧಾಕರ್

ರಾಜ್ಯ(ಬೆಂಗಳೂರು)ಜು.23:-  ಶೀಘ್ರದಲ್ಲೇ ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಆದ್ಯತೆ ಮೇರೆಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ದತೆ ಮಾಡಲಾಗಿದೆ ಎಂದು ಸಚಿವ  ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶಾಲೆಗಳ ಮುಖ್ಯಸ್ಥರು ಕ್ರಮವಹಿಸಿ. ತಮ್ಮ ಸಂಸ್ಥೆಯಲ್ಲಿ 100% ಲಸಿಕೆ ಪಡೆದಿರುವಂತೆ ಸೂಚನೆ  ನೀಡಿದ್ದಾರೆ. ರಾಜ್ಯದಲ್ಲಿ ಹಂತಹಂತವಾಗಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದ್ದು, ಶಾಲೆ ಆರಂಭದ ಹಿನ್ನಲೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: