ದೇಶಪ್ರಮುಖ ಸುದ್ದಿ

ಸ್ಪೋಟಕ ಸಾಗಿಸುತ್ತಿದ್ದ ಡ್ರೋನ್‌ ಹೊಡೆದುರುಳಿಸಿದ ಪೊಲೀಸರು

ದೇಶ(ಜಮ್ಮು)ಜು.23:-  ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಜಮ್ಮು ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಭಾಗದ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋನ್‌ ಅನ್ನು  ಹೊಡೆದುರುಳಿಸಿ, ಅದರಿಂದ ಐದು ಕೆಜಿ ತೂಕದ ಐಇಡಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಭಾಗದ ಕಂಚಕ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯ ಪಡೆ (ಕ್ಯುಆರ್‌ಟಿ)ಯವರು, ಸ್ಪೋಟಕ ಸಾಗಿಸುತ್ತಿದ್ದ ಡ್ರೋನ್‌ ಹೊಡೆದುರುಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಪೋಟಕಗಳನ್ನು ಹೊತ್ತ ಡ್ರೋನ್‌   ಅಂತರರಾಷ್ಟ್ರೀಯ ಗಡಿಯಲ್ಲಿ 7 ರಿಂದ 8 ಕಿಲೋಮೀಟರ್‌ ಒಳಭಾಗದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: