ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೋಕಿಯೊ ಒಲಿಂಪಿಕ್ಸ್ :   ಭಾರತಕ್ಕೆ ನಿರಾಸೆ; ಶೂಟರ್ ಎಲವೆನಿಲ್ ಮತ್ತು ಅಪೂರ್ವಿ ಅರ್ಹತಾ ಸುತ್ತಿನಿಂದ ಹೊರಕ್ಕೆ

ವಿದೇಶ(ಟೊಕಿಯೋ)ಜು.24:- ಶನಿವಾರ ನಡೆದ ಒಲಿಂಪಿಕ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಕಳಪೆ  ಪ್ರದರ್ಶನ ನೀಡಿತ್ತು.

ಪದಕ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟ ಎಲವೆನಿಲ್ ವಲರಿವನ್ ಮತ್ತು ಅಪೂರ್ವಿ ಚಂಡೇಲಾ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್‌ ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಮೊದಲ ಬಾರಿಗೆ ಒಲಿಂಪಿಕ್ಸ್‌ ನಲ್ಲಿ ಆಡುತ್ತಿರುವ ವಿಶ್ವದ ನಂಬರ್ ಒನ್ ಎಲವೆನಿಲ್ 626.5 ಅಂಕಗಳೊಂದಿಗೆ 16 ನೇ ಸ್ಥಾನದಲ್ಲಿದ್ದರೆ , 50 ಶೂಟರ್‌ಗಳಲ್ಲಿ ಚಂಡೇಲಾ 621.9 ಅಂಕಗಳೊಂದಿಗೆ 36 ನೇ ಸ್ಥಾನದಲ್ಲಿದ್ದಾರೆ.

ಪ್ರತಿ ಶೂಟರ್ ತಲಾ ಹತ್ತು ಹೊಡೆತಗಳ ಆರು ಸರಣಿಗಳನ್ನು ಆಡಬೇಕಾಗಿತ್ತು. ಅಗ್ರ ಎಂಟು ಶೂಟರ್‌ಗಳು ಫೈನಲ್‌ ಗೆ ಅರ್ಹತೆ ಪಡೆದರು, ನಾರ್ವೆಯ ಡ್ಯುಸ್ಟಾಡ್ ಜಾನೆಟ್ ಹೇಗ್ 632.9 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿ ಹೊಸ ಒಲಿಂಪಿಕ್ ಅರ್ಹತಾ ದಾಖಲೆಯನ್ನು ಸ್ಥಾಪಿಸಿದರು. ಕೊರಿಯಾದ ಪಾರ್ಕ್ ಹೀಮುನ್ (631.7) ಎರಡನೇ ಮತ್ತು ಅಮೆರಿಕದ ಮೇರಿ ಟಕರ್ (631.4) ಮೂರನೇ ಸ್ಥಾನ ಪಡೆದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: