ಮೈಸೂರು

ಕೆ.ಆರ್ ಎಸ್ ಡ್ಯಾಮ್ ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜು.24:- ಕೆ.ಆರ್ ಎಸ್ ಡ್ಯಾಮ್ ಉಳಿಸುವಂತೆ ಒತ್ತಾಯಿಸಿ ಗಂಧದ ಗುಡಿ ಫೌಂಡೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೆಆರ್ ಎಸ್ ಡ್ಯಾಮ್ ಸುತ್ತ ಮುತ್ತ ನಡೆಯುತ್ತಿರುವ ಹಲವಾರು ಅಕ್ರಮ ಗಣಿಗಾರಿಕೆಯಿಂದ ಡ್ಯಾಮ್ ಗೆ ತೊಂದರೆಯಾಗುತ್ತಿದೆ. ಅತ್ಯಂತ ಫಲವತ್ತಾದ ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗಾಗಿ ಕೆ.ಆರ್.ಎಸ್ ಅಣೆಕಟ್ಟು ಮುಖ್ಯ ನೀರಿನ ಮೂಲವಾಗಿದೆ. ಮೈಸೂರು ಮತ್ತು ಬೆಂಗಳೂರಿಗೆ ಜಲಾಶಯವು ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಕೆ.ಆರ್.ಎಸ್ ಯೋಜನೆಗೆ ಬಂಡವಾಳ ಒದಗಿಸಲು ಮೈಸೂರು ಒಡೆಯರ್ ಮತ್ತು ರಾಣಿ ಕೆಂಪನಂಜಮ್ಮಣ್ಣಿ ದುಬಾರಿ ಆಭರಣಗಳನ್ನು ಮಾರಾಟ ಮಾಡಿದ್ದರು. ಕೆಆರ್ ಎಸ್ ಅಣೆಕಟ್ಟು ಉಳಿಸಿ . ಮೈಸೂರು-ಬೆಂಗಳೂರು ಜನರಿಗೆ ಕೆಆರ್ ಎಸ್ ನೀರು ಉಪಯುಕ್ತವಾಗಿದೆ. ಒಮ್ಮೆ ಅದು ಹಾನಿಗೊಳಗಾದರೆ ಪ್ರತಿಯೊಬ್ಬರೂ ತೊಂದರೆ ಅನುಭವಿಸಬೇಕಾಗುತ್ತದೆ. ನಮ್ಮ ಭವಿಷ್ಯಕ್ಕಾಗಿ ಕೆಆರ್ ಎಸ್ ಅಣೆಕಟ್ಟನ್ನು ಉಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಫೌಂಡೇಶನ್ ರಾಜ್ಯಾಧ್ಯಕ್ಷ ಆರ್ಯನ್ , ರಾಜ್ಯ ಉಪಾಧ್ಯಕ್ಷ ಮನೋಹರ್, ಪದಾಧಿಕಾರಿಗಳಾದ ರತನ್, ಗೋಪಾಲ್, ಮಹಾದೇವ್, ಸುನಿಲ್, ಸಂತೋಷ್, ಸಂಜಯ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: