ಮೈಸೂರು

ಯಡಿಯೂರಪ್ಪನವರು  ರೈಲ್ವೆ ಇಂಜಿನ್ ನಾವು ಬೋಗಿಗಳ ರೀತಿ ಅವರನ್ನು ಅನುಸರಿಸುತ್ತೇವೆ : ಶಾಸಕ ಎಸ್.ಎ.ರಾಮದಾಸ್

ಮೈಸೂರು,ಜು.24:- ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿಂದು ರಾಜ್ಯದಲ್ಲಿ ಸಿಎಂ ಬಿಎಸ್ವೈ ಬದಲಾವಣೆ ವಿಚಾರ‍ಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು  ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ ಎಂದರು.

ರಾಜಕಾರಣ ಹರಿಯುವ ನೀರು. ಯಾರು ಹೋಗುತ್ತಾರೆ, ಯಾರು ಬರುತ್ತಾರೆ  ಅನ್ನುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ತಂದೆಯ ಸಮಾನ. ನಿರಂತರವಾಗಿ ನನ್ನನ್ನು ಯುವಮೋರ್ಚಾ ಅಧ್ಯಕ್ಷನ್ನಾಗಿಸಿ ನನ್ನನ್ನು ಬೆಳೆಸಿದವರು. ಯಡಿಯೂರಪ್ಪನವರು  ರೈಲ್ವೆ ಇಂಜಿನ್, ನಾವು ಬೋಗಿಗಳ ರೀತಿ ಅವರನ್ನು ಅನುಸರಿಸುತ್ತೇವೆ ಎಂದರು.

ಯಡಿಯೂರಪ್ಪ ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾದರೆ, ನಾನು ಯಡಿಯೂರಪ್ಪನವರ ನಿರ್ಧಾರಕ್ಕೆ ಬದ್ಧ. ರಾಜಕಾರಣ ನಡೆಯುತ್ತಾ ಹೋಗುತ್ತೆ. ಅದಕ್ಕೆ ನಾನಾಗಲಿ ಮಠಾಧೀಶರಾಗಲಿ ಬೆಂಬಲ ಕೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: