ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಭಾರತದ ಮೀರಾಬಾಯಿ

ದೇಶ(ನವದೆಹಲಿ)ಜು.24:-  ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವೇಟ್‌ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಇಂದಿನಿಂದ ಭಾರತದ ಪದಕ ಬೇಟೆ ಆರಂಭವಾಗಿದ್ದು, ಮೀರಾಬಾಯಿ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

 

ಪ್ರಧಾನಿ ನರೇಂದ್ರ ಮೋದಿಯವರು ಕೂಡ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.   ಕ್ರೀಡಾ ಫೆಡರೇಷನ್‌ ಗಳು, ಕ್ರೀಡಾಭಿಮಾನಿಗಳು ಮೆಚ್ಚುಗೆ, ಹೆಮ್ಮೆಯ ಹಾಗೂ ಅಭಿಮಾನದ ಸಾಲುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಭಾರತಕ್ಕೆ ಹೆಮ್ಮೆ ತಂದ ಸಾಧಕಿ’ ಎಂದು ಚಿತ್ರ, ವಿಡಿಯೊಗಳ ಸಹಿತ ಪ್ರೀತಿಯ ಅಭಿನಂದನೆಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: