ಮೈಸೂರು

ಭಾಜಪಾ ಕೃಷ್ಣರಾಜ ಕ್ಷೇತ್ರದ ವತಿಯಿಂದ ಮಂಡಲ ಕಾರ್ಯಕಾರಿಣಿ

ಮೈಸೂರು,ಜು.25:-  ಇಂದು ಭಾಜಪಾ ಕೃಷ್ಣರಾಜ ಕ್ಷೇತ್ರದ ವತಿಯಿಂದ ಮಂಡಲ ಕಾರ್ಯಕಾರಿಣಿ ವಿವೇಕಾನಂದ ನಗರದ ನಾಮದೇವ ಸಮುದಾಯ ಭವನದಲ್ಲಿ ನಡೆಯಿತು.

ದೀಪ ಬೆಳಗುವ ಮೂಲಕ ಹಾಗೂ ಭಾರತ ಮಾತೆ, ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಮೈಸೂರು ನಗರ ಪ್ರಭಾರಿ ಹಿರೇಂದ್ರ ಶಾ ಅವರು ಮಾತನಾಡಿ ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಹೆಚ್ಚು ಸ್ಥಾನವನ್ನು ಮೋದಿಯವರು  ನೀಡಿದ್ದಾರೆ. ಕೆ.ಆರ್ ವಿಧಾನಸಭಾ ಕ್ಷೇತ್ರದಲ್ಲಿ ರಾಮದಾಸ್  ಅವರು ಕೊರೊನಾ ಸಮಯದಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ವಿಶೇಷವಾಗಿ ಬೂತ್ ಮಟ್ಟದಲ್ಲಿ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು ರಾಜ್ಯದಲ್ಲಿಯೇ ಮೊದಲಾಗಿದೆ.  ಮುಂದಿನ ಚುನಾವಣೆಯಲ್ಲಿ ನಾವು ಅತ್ಯಂತ ಹೆಚ್ಚಿನ ಲೀಡ್ ಅನ್ನು ಕೊಡುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಕಾರ್ಯಕರ್ತರುಗಳಾದ ನಾವು ನಮ್ಮ ಬೂತ್ ನಲ್ಲಿ ಬರುವ ಸಮಸ್ಯೆಗಳೇನು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡಬಹುದೇ ಎಂದು ಅವಲೋಕಿಸಬೇಕಾಗಿದೆ ಎಂದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನ ಕುರಿತು ಮಾತನಾಡಿದ   ಶಾಸಕರಾದ ಎಸ್.ಎ ರಾಮದಾಸ್ ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಇತ್ತು, ರಾಜ್ಯ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಿ ಜನರ ಸಂಕಷ್ಟವನ್ನು ಬಗೆಹರಿಸುವ ಕಾರ್ಯಕ್ಕೆ ಇಳಿಯಿತು. ಈ ಕೊರೊನಾ ಸಮಯದಲ್ಲಿಯೂ ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ, ಚಾಲಕರುಗಳಿಗೆ , ಮನೆ ಕೆಲಸ ಮಾಡುವವರಿಗೆ ಸಹಾಯಧನ ನೀಡುವ ಕೆಲಸವನ್ನು ಒಂದನೇ ಅಲೆ ಹಾಗೂ ಕೊರೊನಾ 2 ನೆ ಅಲೆಯಲ್ಲೂ ಮಾಡುತ್ತಿದೆ. ಕೊರೊನಾ ದಿಂದ ಮೃತಪಟ್ಟ ಬಿ.ಪಿ. ಎಲ್ ಕುಟುಂಬಕ್ಕೆ 1 ಲಕ್ಷ ರೂ ಗಳನ್ನು ನೀಡುವ ಕಾರ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರ  ಚಾಲನೆ ನೀಡಿದೆ. ಜಿಲ್ಲೆಗೊಂದು ಗೋ ಶಾಲೆಯನ್ನು ಘೋಷಣೆ ಮಾಡಿ ಇನ್ನು ಕೆಲವು ದಿನಗಳಲ್ಲಿ ಈ ಕೆಲಸ ಪ್ರಾರಂಭವಾಗಲಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಅಭೂತಪೂರ್ವವಾದ ಅಭಿವೃದ್ಧಿ ಮಾಡುತ್ತಿದೆ.ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ನಡೆಯುತ್ತಿವೆ.  ವಿಶ್ವಗುರು ಮಾಡುವತ್ತ ಪ್ರಧಾನಿ ಮೋದಿ  ಕರೆ ನೀಡಿದ್ದಾರೆ , ಆರ್ಟಿಕಲ್ 370 ರದ್ಧತಿ, ತ್ರಿವಳಿ ತಲಾಖ್ ರದ್ಧತಿ, 2030 ರ ಒಳಗೆ ದೇಶದ ರೈಲ್ವೆಯನ್ನ ಸಂಪೂರ್ಣ ವಿದ್ಯುದಿಕರಣ ಮಾಡುವತ್ತ ಭಾರತ ಹೆಜ್ಜೆ ಇಡುತ್ತಿದೆ. ಈಗಾಗಲೇ 40 ಕೋಟಿ ಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ, ಅಲ್ಲದೇ ಎಲ್ಲರಿಗೂ ಉಚಿತ ಲಸಿಕೆಯನ್ನು ಮೋದಿಜಿ ನೇತೃತ್ವದ ಸರ್ಕಾರ ನೀಡುತ್ತಿದೆ. ನಮ್ಮ ಕ್ಷೇತ್ರದಲ್ಲೂ ಈಗಾಗಲೇ 1.8 ಲಕ್ಷ ಕ್ಕೂ ಅಧಿಕ ಜನರಿಗೆ ವ್ಯಾಕ್ಸಿನೇಷನ್ ಆಗಿದೆ. ಭಾರತಕ್ಕೆ  ಸ್ವಾತಂತ್ರ್ಯ ಬಂದು 75 ವರ್ಷಗಳಾದಾಗ ಎಲ್ಲರಿಗೂ ಸೂರು ನೀಡಬೇಕೆಂಬ ಕನಸು ಪ್ರಧಾನಿ ಮೋದಿಯವರಿಗಿದೆ ಅಲ್ಲದೇ ಕಾರ್ಯಗಳೂ ನಡೆಯುತ್ತಿವೆ. ಪಿ.ಎಂ ಕೇರ್ಸ್ ವತಿಯಿಂದ ದೇಶದಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ವೆಂಟಿಲೇಟರ್ ಗಳನ್ನು ತಲುಪಿಸುತ್ತಿವೆ. ಮುಖ್ಯವಾಗಿ ನಮ್ಮ ಮುಂದೆ ಇಷ್ಟೊಂದು ಯೋಜನೆಗಳಿವೆ ನಾವು ಅದನ್ನು ಅನುಷ್ಠಾನಗೊಳಿಸುವತ್ತ ಹೆಜ್ಜೆ ಇಡಬೇಕು ಎಂದರು.

ರಾಜ್ಯ ಭಾಜಪಾ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್   ಮಾತನಾಡಿ. ನಾವೆಲ್ಲರೂ ಮೋದಿ  ಅವರ ಮನ್ ಕಿ ಬಾತ್ ಅನ್ನು ಕೇಳುತ್ತೇವೆ ಅವರ ಪ್ರತಿ ಮನ್ ಕಿ ಬಾತ್ ನಲ್ಲೂ ಸಹ ವಿಶೇಷವಾದ ಅಂಶವಿರುತ್ತದೆ ಅದನ್ನು ನಾವುಗಳು ಅಳವಡಿಸಿಕೊಳ್ಳಬೇಕು. ಭಾಜಪಾ ಕಾರ್ಯಕರ್ತರಾದ ನಾವು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನ ಮಾಡಬೇಕು ಅದು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತದ್ದು, ಸರ್ಕಾರದ ಒಳ್ಳೆಯ ವಿಷಯಗಳನ್ನು ಪಸರಿಸುವುದು ಹೀಗೆ. ಇದೀಗ ಒಲಂಪಿಕ್ಸ್ ನಲ್ಲಿ ಭಾರತ ಒಂದು ಬೆಳ್ಳಿ ಪದಕವನ್ನು ಗೆದ್ದಿದೆ, ಮೋದಿ ಅವರು ಎಲ್ಲಾ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದರು,ನಾವೂ ಕೂಡಾ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ನಮ್ಮ ಸುತ್ತಮುತ್ತಲಿನವರು ವ್ಯಾಕ್ಸಿನೇಷನ್ ತೆಗೆದುಕೊಂಡರಾ , ಅವರು ತೆಗೆದುಕೊಂಡಾದ ನಂತರ ಅವರ ಅಭಿಪ್ರಾಯ ಏನು ಎಂದು ಕೇಳಿ ಅದನ್ನು ನಾಲ್ಕಾರು ಕಡೆ ಹಂಚುವ ಕೆಲಸ ಮಾಡಬೇಕು. 80 ಕೋಟಿ ಜನತೆಗೆ ದೀಪಾವಳಿ ವರೆಗೆ ಉಚಿತ ರೇಷನ್ ಅನ್ನು ಮೋದಿ  ಸರ್ಕಾರ ನೀಡುತ್ತಿದೆ ಇದು ಜಗತ್ತಿನ ಯಾವುದೇ ದೇಶದಲ್ಲಿ ನೋಡಲು ಸಿಗುವುದಿಲ್ಲ. ಇಂತಹ ಹತ್ತಾರು ಯೋಜನೆಗಳನ್ನು ಜನರಿಗೆ ಹೇಳುವತ್ತ, ಮುಟ್ಟಿಸುವತ್ತ ನಮ್ಮ ಕಾರ್ಯ ಸಾಗಬೇಕು ಎಂದರು.

ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ   ಮಾತನಾಡಿ  ಕಾರ್ಯಕರ್ತರಾದ ನಾವುಗಳು ಇನ್ನೂ ಹೆಚ್ಚು ಕಾರ್ಯಪ್ರವೃತ್ತರಾಗಬೇಕಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಮ್ಮ ಪ್ರಕೋಷ್ಟಗಳು ಕ್ರಿಯಾಶೀಲಾರಾಗಬೇಕಿದೆ. ಮೈಸೂರು ಜಿಲ್ಲೆಯ ಭಾಜಪಾ ಕಾನೂನು ಪ್ರಕೋಷ್ಟ ತಿಂಗಳ ನಾಲ್ಕನೇ ಶನಿವಾರ ಜನಸಾಮಾನ್ಯರಿಗೆ ಹಾಗೂ ಕಾರ್ಯಕರ್ತರಿಗೆ ಉಚಿತ ಕಾನೂನು ಸಲಹೆಗಳನ್ನು ನೀಡುವತ್ತ ಹೆಜ್ಜೆ ಇಡುತ್ತಿದೆ. ಮನೆ ಮನೆಗೆ ಸರ್ಕಾರವನ್ನು ತಲುಪಿಸುವ ಜವಾಬ್ದಾರಿ ನಮ್ಮದು ಎಂದರು.

ಕಾರ್ಯಕ್ರಮದಲ್ಲಿ ಭಾಜಪಾ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ನಗರ ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಸೋಮ ಸುಂದರ್,ವಾಣೀಶ್, ಭಾಜಪಾ ಮೈಸೂರು ವಿಭಾಗ ಪ್ರಭಾರಿಗಳಾದ ರವಿಶಂಕರ್, ಕೆ.ಆರ್ ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ಜೆ ನಾಗೇಂದ್ರಕುಮಾರ್. ಉಪಾಧ್ಯಕ್ಷರಾದ ಸಂತೋಷ್ ಶಂಭು, ನಗರಪಾಲಿಕಾ ಸದಸ್ಯರುಗಳು, ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸ್ಥರದ ಜವಾಬ್ದಾರಿಯುತ ಕಾರ್ಯಕರ್ತರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: