ಮೈಸೂರು

ಕಾರ್ಗಿಲ್ ವಿಜಯ ದಿವಸ: ಬೈಕ್ ರ್ಯಾಲಿ

ಮೈಸೂರು,ಜು.26:- ಇಂದು 22ನೇ  ವರ್ಷದ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಮೈಸೂರು ಎಕ್ಸ್ ಸರ್ವಿಸ್ಮೆನ್ ಮೂವ್ ಮೆಂಟ್ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಬೈಕ್ ರ್ಯಾಲಿಯಲ್ಲಿ ಯುವಪೀಳಿಗೆಗೆ ದೇಶಾಭಿಮಾನದ ಭಾವನೆ ಮೂಡಿಸುವ ಹಾಗೂ ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಯಿತು.  ಬೆಳಿಗ್ಗೆ 9ಗಂಟೆಗೆ ಕೆ.ಸಿ.ಲೇಔಟ್ ನಲ್ಲಿರುವ ವೀರಯೋಧ ಎ.ಪಿ.ಪ್ರಶಾಂತ್ ಉದ್ಯಾನವನದಿಂದ ಹೊರಟ ರ್ಯಾಲಿಯು ಮೈಸೂರು ಝೂ, ಕೆ.ಆರ್.ಸರ್ಕಲ್, ರೈಲ್ವೆ ಸರ್ಕಲ್, ಹಳೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಸಾಗಿ ಬಂದು ಓವಲ್ ಮೈದಾನದಲ್ಲಿ ಮುಕ್ತಾಯಗೊಂಡಿತು ಎಂದು ಮುಖ್ಯಕಾರ್ಯದರ್ಶಿ ಶ್ರೀಧರ್ ಸಿಎಂ ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: