ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೆನಿಸ್ ನಲ್ಲಿ ಕಮರಿದ ಭಾರತದ ಪದಕದ ಕನಸು : ಸೋತ ಸುಮಿತ್ ನಾಗಲ್

ವಿದೇಶ(ಟೋಕಿಯೋ)ಜು.26:-  ಎರಡನೇ ಸುತ್ತಿನ ಟೆನಿಸ್ ಪುರುಷರ ಸಿಂಗಲ್ಸ್‌ನಲ್ಲಿ ನೇರ ಸೆಟ್‌ಗಳಲ್ಲಿ ರಷ್ಯಾದ ಒಲಿಂಪಿಕ್ ಸಮಿತಿಯ (ಆರ್‌ಒಸಿ) ಡೇನಿಲ್ ಮೆಡ್ವೆಡೆವ್ ಅವರು ಸುಮಿತ್ ನಾಗಲ್ ಅವರನ್ನು ಸೋಲಿಸಿದರು. ಇದರೊಂದಿಗೆ  ಈ ಒಲಿಂಪಿಕ್ಸ್‌ ನ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಕೊನೆಗೊಂಡಿದೆ.

ವಿಶ್ವ ರ್ಯಾಂಕಿಂಗ್‌ ನಲ್ಲಿ 160 ನೇ ಸ್ಥಾನದಲ್ಲಿರುವ ನಾಗಲ್ 2-6, 1-6 ಅಂತರದಿಂದ ವಿಶ್ವದ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್ ವಿರುದ್ಧ ಸೋತರು. ಒಂದು ಗಂಟೆ ಆರು ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಮೆಡ್ವೆಡೆವ್ ಮೊದಲ ಸೆಟ್‌ ನಲ್ಲಿ ಎರಡು ಬಾರಿ ಮತ್ತು ಎರಡನೇ ಸೆಟ್‌ ನಲ್ಲಿ ಮೂರು ಬಾರಿ ನಾಗಲ್ ಅವರ ಸರ್ವ್ ಅನ್ನು ಮುರಿದರು. ಇದಕ್ಕೂ ಮುನ್ನ ನಾಗಲ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನ್‌ ದ ಡೆನಿಸ್ ಇಸ್ತೋಮಿನ್ ಅವರನ್ನು 6-4, 6-7, 6-4 ಸೆಟ್‌ಗಳಿಂದ ಸೋಲಿಸಿದ್ದರು. ಇದರೊಂದಿಗೆ ನಾಗಲ್ 25 ವರ್ಷಗಳಲ್ಲಿ ಒಲಿಂಪಿಕ್ಸ್‌ ನಲ್ಲಿ ಪುರುಷರ ಸಿಂಗಲ್ಸ್ ಪಂದ್ಯಾವಳಿಯನ್ನು ಗೆದ್ದ ಮೂರನೇ ಭಾರತೀಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: