ಮೈಸೂರು

ಬಿ.ಎಸ್.ಯಡಿಯೂರಪ್ಪ ನವರ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ : ಶಾಸಕ ಎಲ್.ನಾಗೇಂದ್ರ

ಮೈಸೂರು, ಜು.26:- ಬಿಜೆಪಿ ಅಗ್ರಗಣ್ಯ ನಾಯಕ ಯಡಿಯೂರಪ್ಪ ನವರು ಅವರ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಮೈಸೂರಿನ ಲ್ಲಿಂದು ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ನವರು ರಾಜೀನಾಮೆ ನೀಡಿರುವ ಕುರಿತು ಮಾಧ್ಯಮ ಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ನವರೆ ಕಾರಣ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವೈಯುಕ್ತಿಕವಾಗಿ ನನ್ನ ಮನಸ್ಸಿಗೆ ನೋವಾಗಿದೆ. ವರಿಷ್ಠರ ಸೂಚನೆಯ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ ಎಂದರು.
ಅವರು ಯಾವತ್ತೂ ಅಭಿವೃದ್ಧಿ ಗೆ ಒತ್ತು ನೀಡಿದ್ದರು. ರೈತ ನಾಯಕರಾಗಿದ್ದರು. ನಾನು ಓರ್ವ ಶಾಸಕನಾಗಲು ಕೂಡ ಯಡಿಯೂರಪ್ಪ ನವರೇ ಕಾರಣ. ಓರ್ವ ಕಾರ್ಯಕರ್ತನಾಗಿ ಬಂದವನನ್ನು ಯುವ ಮೋರ್ಚಾ ಅಧ್ಯಕ್ಷ ನನ್ನಾಗಿ ಮಾಡಿದರು. ಬಳಿಕ ಪಾಲಿಕೆ ಸದಸ್ಯ, ಮುಡಾ ಅಧ್ಯಕ್ಷ ನನ್ನಾಗಿಯೂ ಮಾಡಿದ್ದರು. ಅವರ ಕೆಲಸ ಕಾರ್ಯಗಳನ್ನು ಯಾವ ಕಾರ್ಯಕರ್ತನು ಮರೆಯಲು ಸಾಧ್ಯವಿಲ್ಲ. ಮನಸ್ಸಿಗೆ ನೋವಾಗಿದೆ. ಇನ್ನೂ ಹೆಚ್ಚಿನ ಅಧಿಕಾರ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಅವರು ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಅವರೇ ನಿರ್ಧರಿಸಿದ ಮೇಲೆ ನಾವು ಅವರ ಅನುಯಾಯಿಗಳು. ನಾವೂ ಅವರನ್ನು ಅನುಸರಿಸುತ್ತೇವೆ ಎಂದರು.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಗಳು ಅವರ ನೇತೃತ್ವದಲ್ಲಿ ಯೇ ನಡೆಯಲಿದೆ. ಅವರ ರಾಜೀನಾಮೆ ಚುನಾವಣೆ ಗಳ ಮೇಲೆ ಎಫೆಕ್ ಆಗಲ್ಲ. ಅವರೇ ಹೇಳಿದ್ದಾರೆ ನಾವೆಲ್ಲ ಸೇರಿ ಪಕ್ಷ ಕಟ್ಟೋಣ, ಮತ್ತೊಮ್ಮೆ ಬಿಜೆಪಿ ಯನ್ನು ಅಧಿಕಾರಕ್ಕೆ ತರೋಣ ಅಂತ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: