ಮೈಸೂರು

ಯುವಕರು ಹೆಚ್ಚು ಹೆಚ್ಚು ಸೇನೆ ಸೇರಬೇಕು : ಶಾಸಕ ರಾಮದಾಸ್

ಮೈಸೂರು, ಜು.26:-  ಇಂದು ಮೈಸೂರು ಮಾಜಿ ಸೈನಿಕರ ಮೂವ್ ಮೆಂಟ್( MYSURU EX-SERVICEMEN MOVEMENT) ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಬೈಕ್ ರ್‍ಯಾಲಿಯನ್ನಿ ಕೆ.ಸಿ ಲೇ ಔಟ್ ನ ಹುತಾತ್ಮ ಯೋಧ ಪ್ರಶಾಂತ್ ಪಾರ್ಕ್ ನಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ
ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಿ ಮಾತನಾಡಿದ  ಶಾಸಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತ್ಯಂತ ಹೆಮ್ಮೆ ಅನಿಸುತ್ತದೆ. ನಾನು ಓರ್ವ ನಿವೃತ್ತ ಮಿಲಿಟರಿ ಅಧಿಕಾರಿಯ ಮಗ, ಹಾಗಾಗಿ ನನಗೆ ಯೋಧರ ಕಷ್ಟಗಳೇನು, ಭಾವನೆಗಳೇನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನಾನು ಓರ್ವ ಮಿಲಿಟರಿ ಅಧಿಕಾರಿ ಆಗ ಬೇಕೆಂದು ಆಸೆ ಇತ್ತು ಆದರೆ ಕಾರಣಾಂತರಗಳಿಂದ ಆ ಆಸೆ ನೆರವೇರಲಿಲ್ಲ.1999 ರ ಯುದ್ಧ ಭಾರತದ ತಾಕತ್ತು ತೋರಿಸಿಕೊಟ್ಟಿತ್ತು, ಇಡೀ ದೇಶವೇ ಸೈನಿಕರೊಂದಿಗೆ ಇದೆ ಎಂಬುವ ಸಂದೇಶವನ್ನು ಸಾರಿತ್ತು. ಹುತಾತ್ಮ ಯೋಧ ಪ್ರಶಾಂತ್ ಪಾರ್ಕ್ ಅನ್ನು ಕಾರ್ಗಿಲ್ ಪಾರ್ಕ್ ಆಗಿ ಮಾಡಬೇಕೆಂಬ ಇಚ್ಛೆ ನಮಗಿದೆ. ಅದಕ್ಕೆ ಬೇಕಾದಂತಹ ಯೋಜನೆಗಳನ್ನು ರೂಪಿಸುತ್ತೇವೆ. ಮುಂದಿನ ವರ್ಷ ಕಾರ್ಗಿಲ್ ವಿಜಯದ ದಿನದಂದು ನಾವೆಲ್ಲ ಎಲ್ಲಾ ಶಾಲೆಗಳಿಗೂ ತೆರಳಿ ಕಾರ್ಗಿಲ್ ದಿವಸದ ಬಗ್ಗೆ ತಿಳಿಸುವ ಕಾರ್ಯವನ್ನು ನಾವೆಲ್ಲ ಸೇರಿ ಮಾಡೋಣ. ಅಲ್ಲದೇ ಹೆಚ್ಚು ಹೆಚ್ಚು ಯುವಕರು ಸೇನೆಗೆ ಸೇರಬೇಕು. ಆ ನಿಟ್ಟಿನಲ್ಲಿ ನಾವು ಯಾವ ಯೋಜನೆಯನ್ನು ರೂಪಿಸಬೇಕು ಎಂದು ಯೋಚಿಸೋಣ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ನಗರಪಾಲಿಕಾ ಸದಸ್ಯರಾದ ಛಾಯಾದೇವಿ, ನಿವೃತ್ತ ಯೋಧರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: