ದೇಶಪ್ರಮುಖ ಸುದ್ದಿ

ಕಾರ್ಗಿಲ್ ವಿಜಯ್ ದಿವಸ್: 11,649 ಅಡಿ ಎತ್ತರದಲ್ಲಿ ಬೈಕ್​ ರ‍್ಯಾಲಿ ನಡೆಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಭಾರತೀಯ ಸೇನೆ

ನವದೆಹಲಿ,ಜು.26-ಕಾರ್ಗಿಲ್​ ವಿಜಯ್​ ದಿವಸ್ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್​​ನ ಕಡಿದಾಗಿರುವ ಪರ್ವತ ಶ್ರೇಣಿಯಲ್ಲಿ 11,649 ಅಡಿಯಷ್ಟು ಎತ್ತರದಲ್ಲಿ ಎರಡು ಬೈಕ್​ ರ‍್ಯಾಲಿಗಳನ್ನು ನಡೆಸಿದೆ.

ಕಾರ್ಗಿಲ್​ ಯುದ್ಧ ಸ್ಮಾರಕದಲ್ಲಿನ ಹುತಾತ್ಮ ಯೋಧರಿಗೆ ಈ ಮೂಲಕ ನಮನ ಸಲ್ಲಿಸಿದೆ. ರ‍್ಯಾಲಿ ಆರಂಭದ ಕುರಿತು ಟ್ವಿಟರ್​ನಲ್ಲಿ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್ ​ರ‍್ಯಾಲಿ ಮುನ್ನಡಿಸಿದ ಕಾರ್ಗಿಲ್​ ಹೀರೋ, ಉತ್ತರ ಸೈನ್ಯದ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ವೈ.ಕೆ. ಜೋಶಿ ಹೇಗಿದೆ ಜೋಶ್​ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉಳಿದ ಯೋಧರು ಹೈ ಸರ್​ ಎಂದು ಉತ್ತರ ಕೊಟ್ಟಿದ್ದು, ಅದೀಗ ಸಹಸ್ರಾರು ಮಂದಿಯ ಹೃದಯ ಗೆದ್ದಿದೆ.

11,649 ಅಡಿಯಲ್ಲಿರುವ ಭಯಾನಕ ಜೋಜಿಲಾ ಪಾಸ್​ನ್ನು ಬೈಕ್​ ಸವಾರರು ದಾಟಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು, ಆರ್ಮಿ ಕಮಾಂಡರ್​ ತಂಡವನ್ನ ಮುನ್ನಡೆಸೋದು ಅಂದರೆ ಜೋಶ್​ ಹೆಚ್ಚಾಗಿಯೇ ಇರಬೇಕು ಎಂದು ಶೀರ್ಷಿಕೆ ನೀಡಲಾಗಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: