ಕ್ರೀಡೆದೇಶಪ್ರಮುಖ ಸುದ್ದಿ

ಪದಕ ವಿಜೇತೆ ಮೀರಾಬಾಯಿ ಚಾನು ಇನ್ನು ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್​

ದೇಶ (ನವದೆಹಲಿ)ಜು.27:-: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ವಿಜಯ ಪತಾಕೆ ಹಾರಿಸಿ  ದೇಶಕ್ಕೆ ಮರಳಿದ ವೇಯ್ಟ್​ ಲಿಫ್ಟರ್​ ಸೈಖೋಂ ಮೀರಾಬಾಯಿ ಚಾನು ಅವರನ್ನು ಮಣಿಪುರ ಪೊಲೀಸ್​ ಇಲಾಖೆಯಲ್ಲಿ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್​ ಆಗಿ ನೇಮಕ ಮಾಡಲಾಗುವುದು ಎಂದು ರಾಜ್ಯದ ಸಿಎಂ ಎನ್​.ಬೈರೆನ್ ಸಿಂಗ್ ಹೇಳಿದ್ದಾರೆ.

ರಾಜ್ಯಕ್ಕೆ ಕೀರ್ತಿ ತಂದಿರುವ ಚಾನು ಅವರಿಗೆ 1 ಕೋಟಿ ರೂ. ಬಹುಮಾನವನ್ನೂ ನೀಡಲಾಗುವುದು ಎಂದಿರುವ ಸಿಎಂ   ರಾಜ್ಯದಲ್ಲಿ ಶೀಘ್ರವಾಗಿಯೇ ವಿಶ್ವ ದರ್ಜೆಯ ವೇಯ್ಟ್​ ಲಿಫ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ. ರಾಜ್ಯದ ಜೂಡೋ ಆಟಗಾರ್ತಿ ಎಲ್.ಸುಶೀಲಾ ದೇವಿ ಅವರಿಗೆ ಕಾನ್​​ ಸ್ಟೆಬಲ್ ಹುದ್ದೆಯಿಂದ ಸಬ್​ ಇನ್ಸ್​ಪೆಕ್ಟರ್ ಆಗಿ ಬಡ್ತಿ ನೀಡಲಾಗುವುದು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಮಣಿಪುರ ಸರ್ಕಾರದ ವತಿಯಿಂದ ತಲಾ 25 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: