ಮೈಸೂರು

2021ರ ನವೆಂಬರ್ ವರೆಗೆ ಕಬಿನಿ ಬಳದಂಡೆ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರು

ಮೈಸೂರು, ಜು. 26 :- ಕಾವೇರಿ ನೀರಾವರಿ ನಿಗಮದ ವತಿಯಿಂದ ಕಬಿನಿ ಯೋಜನೆಯಡಿಯಲ್ಲಿ 2021ರ ಖಾರೀಫ್ ಬೆಳೆಗಳಿಗಾಗಿ ಕಬಿನಿ ಬಲದಂಡೆ ನಾಲೆಯ ಅಚ್ಚಕಟ್ಟು ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ನವೆಂಬರ್‌ವರೆಗೆ ನೀರು ಹರಿಸಲಾಗುವುದು.
ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ಒಟ್ಟು 108060 ಎಕರೆಗಳ ಪ್ರದೇಶಗಳಿಗೆ ಖಾರೀಫ್ ಬೆಳೆಯ ಅವಧಿಯಲ್ಲಿ ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಕಬಿನಿ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಲಭ್ಯತೆ ಮೇರೆಗೆ ನಾಲೆಗಳಲ್ಲಿ ನೀರು ಹರಿಸಲಾಗುವುದು.
ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ಮೇಲ್ಕಂಡ ನೀರು ಬಿಡುವ ವೇಳಾ ಪಟ್ಟಿಯು ಪರಿಷ್ಕರಣೆಗೆ ಒಳಪಟ್ಟಿದ್ದು, ಉಂಟಾಗಬಹುದಾದ ಬೆಳೆಹಾನಿಗೆ ಕಾವೇರಿ ನೀರಾವರಿ ನಿಗಮವು ಜವಬ್ದಾರರಾಗಿರುವುದಿಲ್ಲ. ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ನಾಲೆಯ ನೀರಿನ ಅವಲಂಬಿತ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಬೇಕಾಗಿದೆ.
ಪ್ರಕಟಣೆಯನ್ನು ಉಲ್ಲಂಘಿಸಿ ನೀರಾವರಿ ಅವಲಂಬಿತ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ಕಾವೇರಿ ನೀರಾವರಿ ನಿಗಮವು ಯಾವುದೇ ರೀತಿಯ ಜವಬ್ದಾರರಲ್ಲವೆಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: