ಮೈಸೂರು

ರಾಮಾನುಜಾಚಾರ್ಯರ ಜಯಂತಿ ಆಚರಣೆಗೆ ಸರ್ಕಾರದಿಂದ ನಿರ್ಲಕ್ಷ್ಯ : ಖಂಡನೀಯ

ಸಮಾನತೆಯ ಹರಿಕಾರ ರಾಮಾನುಜಾಚಾರ್ಯರ ಸಹಸ್ರಮಾನ ಜಯಂತಿ ಆಚರಣೆಗೆ ಕಾಂಗ್ರೆಸ್ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿರುವುದು ರಾಜ್ಯದ ದುರಂತ ಎಂದು ಅಖಂಡ ಭಾರತ ಸೇವಾ ಸೇನಾ ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗೋ ಮೈಸೂರು ಸಂಚಾಲಕ ಚೇತನ್ ಮಂಜುನಾಥ್ ಸರ್ಕಾರದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ, ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಮಾನುಜಾಚಾರ್ಯರ ಜಯಂತಿಯಂಗವಾಗಿ ಸರ್ಕಾರಿ ರಜೆ ಬೇಕಿಲ್ಲ ಬದಲಾಗಿ ಅವರ ತತ್ವ ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸಲಿ ಎಂದು ಕೋರಿ, ಅಲ್ಪಸಂಖ್ಯಾತರ ಓಲೈಕೆ, ಮತಬ್ಯಾಂಕ್ ಗಾಗಿ  ಶಾದಿಭಾಗ್ಯ, ಹಜ್ ಯಾತ್ರೆಗೆ ಸಬ್ಸಿಡಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಸರ್ಕಾರ, ಬಹುಸಂಖ್ಯಾತರನ್ನು ತೀವ್ರ ನಿಕೃಷ್ಟವಾಗಿ ಕಾಣುತ್ತಿದೆ. ಹಲವಾರು ಪ್ರತಿಭಟನೆ ವಿವಾದದ ನಡುವೆಯೂ ಟಿಪ್ಪು ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಅದ್ಧೂರಿಯಾಗಿ ಆಚರಿಸಿದೆ. ಆದರೆ ರಾಮಾನುಜಾಚಾರ್ಯರ ಜಯಂತಿಯನ್ನು ಕಡೆಗಣಿಸಿರುವುದು ಖೇದಕರವೆಂದರು.

ಮೇಲುಕೋಟೆ ಯತಿರಾಜಮಠದಿಂದ ಸಹಸ್ರಮಾನದ ಜಯಂತಿಯಂಗವಾಗಿ ಮೇ.14ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಇದಕ್ಕೂ ಸರ್ಕಾರದಿಂದ ಯಾವುದೇ ರೀತಿ ನೆರವಿಲ್ಲವೆಂದು ಬೇಸರಿಸಿ   ಸರ್ಕಾರ ತಾರತಮ್ಯ ನೀತಿಯನ್ನು ಬದಿಗಿರಿಸಬೇಕೆಂದು ಮನವಿ ಮಾಡಿದರು.

ಸಂಘಟನೆಯ ಸ್ವಾಮಿಗೌಡ, ಕಾರ್ತಿಕ್, ಶಿವಕುಮಾರ್ ಹಾಗೂ ಧನಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: