ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಸ್ಪೇನ್ ತಂಡವನ್ನು 3-0 ಅಂತರದಿಂದ ಮಣಿಸಿದ ಭಾರತದ ಪುರುಷರ ಹಾಕಿ ತಂಡ

ವಿದೇಶ(ಟೋಕಿಯೊ).ಜು.27:-  ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ತಂಡವನ್ನು 3-0 ಅಂತರದಿಂದ ಮಣಿಸುವ ಮೂಲಕ   ಎರಡನೇ ಗೆಲುವು ದಾಖಲಿಸಿದೆ.

ಕಳೆದ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವದ ನಂ. 9 ಸ್ಪೇನ್‌ ವಿರುದ್ಧ ಗೆಲುವು ದಾಖಲಿಸುವಲ್ಲಿ ಸಿಮ್ರನ್‌ಜೀತ್‌ ಸಿಂಗ್ ಮತ್ತು ರೂಪೀಂದರ್ ಪಾಲ್ ಸಿಂಗ್ ಮಹತ್ತರ ಪಾತ್ರ ವಹಿಸಿದರು.ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2ರಿಂದ ಗೆಲುವು ಸಾಧಿಸುವ ಮೂಲಕ ಭಾರತ ಶುಭಾರಂಭ ಮಾಡಿತ್ತು.

ಸ್ಪೇನ್‌ ತಂಡವು ಈವರೆಗೆ ಗೆಲುವು ದಾಖಲಿಸಿಲ್ಲ. ನ್ಯೂಜಿಲೆಂಡ್‌ ವಿರುದ್ಧ 3-4ರಲ್ಲಿ ಸೋಲನುಭವಿಸಿದ್ದ ಸ್ಪೇನ್ ಅರ್ಜೆಂಟಿನಾ ವಿರುದ್ಧದ ಪಂದ್ಯವನ್ನು 1-1ರಿಂದ ಡ್ರಾ ಮಾಡಿಕೊಂಡಿತ್ತು.

ಭಾರತ ತಂಡದ ಮುಂದಿನ ಪಂದ್ಯವು ಒಲಿಂಪಿಕ್ ಚಾಂಪಿಯನ್ ತಂಡ ಅರ್ಜೆಂಟೀನಾ ವಿರುದ್ಧ ಗುರುವಾರ ನಡೆಯಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: