ಮೈಸೂರು

ಇಂಜಿನಿಯರಿಂಗ್ ವರ್ಕ್ಸ್ ನ ಬಾಗಿಲು ಮೀಟಿ ಕಳ್ಳತನ : ಇಬ್ಬರ ಬಂಧನ

ಮೈಸೂರು, ಜು.27:- ಇಂಜಿನಿಯರಿಂಗ್ ವರ್ಕ್ಸ್ ನ ಬಾಗಿಲು ಮೀಟಿ ಬೆಲೆಬಾಳುವ ಯಂತ್ರಗಳನ್ನು ಕದ್ದೊಯ್ದಿದ್ದ ಇಬ್ಬರು ಕಳ್ಳರನ್ನು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತೌಸಿಫ್ ಖಾನ್ ಹಾಗೂ ಮಹಮದ್ ಸಿದ್ಧಿಕ್ ಎಂದು ಗುರುತಿಸಲಾಗಿದೆ. ಇವರು ರಮ್ಮನಹಳ್ಳಿಯ ಎನ್.ಹೆಚ್. ಇಂಜಿನಿಯರಿಂಗ್ ವರ್ಕ್ಸ್ ನ ಬಾಗಿಲು ಮೀಟಿ 20,500ರೂ. ಬೆಲೆ ಬಾಳುವ ವೆಲ್ಡಿಂಗ್ ಯಂತ್ರ ಹಾಗೂ ಕಟಾಫ್ ಯಂತ್ರಗಳನ್ನು ಕದ್ದೊಯ್ದಿದ್ದರು. ಯಂತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ವಿ.ಎಸ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: