ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ನಿರಾಶೆಗೊಳಿಸಿದ ಭಾರತೀಯ ಶೂಟರ್ಸ್ : ಮಿಶ್ರ ತಂಡ ಸ್ಪರ್ಧೆಯಿಂದ ಸೌರಭ್ ಚೌಧರಿ, ಮನು ಬಾಕರ್ ಹೊರಕ್ಕೆ

ವಿದೇಶ(ಟೊಕಿಯೋ)ಜು.27:- ಭಾರತೀಯ ಶೂಟರ್‌ಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

10 ಮೀ ಏರ್ ಪಿಸ್ತೂಲ್‌ನ ಮಿಶ್ರ ತಂಡದ ಸ್ಪರ್ಧೆಯಲ್ಲಿ, ಸೌರಭ್ ಚೌಧರಿ ಮತ್ತು ಮನು ಭಾಕರ್ ಜೋಡಿ ಇಂದು ಎರಡನೇ ಸುತ್ತಿನ ಅರ್ಹತೆಯಲ್ಲಿ ಸೋಲನುಭವಿಸಿದ್ದಾರೆ.   ಈ ಸುತ್ತಿನಲ್ಲಿ ಭಾರತೀಯ ಜೋಡಿ ಒಟ್ಟು 380 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇದಕ್ಕೂ ಮುನ್ನ ಸೌರಭ್ ಮತ್ತು ಮನು ಭಾಕರ್ 582 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿದ್ದು, ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದರು.

ಎರಡನೇ ಸುತ್ತಿನಲ್ಲಿ ಸೌರಭ್ 96 ಮತ್ತು 98 ಅಂಕಗಳೊಂದಿಗೆ ಒಟ್ಟು 194 ಅಂಕಗಳನ್ನು ಗಳಿಸಿದರು ಆದರೆ ಮನು 186 (92 ಮತ್ತು 94) ಗಳಿಸಿದರು. ಇದರೊಂದಿಗೆ ಭಾರತೀಯ ಜೋಡಿ ಫೈನಲ್‌ ನಿಂದ ಹೊರಬಿದ್ದರು. ಮೊದಲ ಸುತ್ತಿನ ಅರ್ಹತೆಯಲ್ಲಿ ಸೌರಭ್ ಮತ್ತು ಮನುಗಿಂತ ಒಂದು ಪಾಯಿಂಟ್ ಹಿಂದಿದ್ದ ಚೀನಾದ ಜೋಡಿ ಜಿಯಾಂಗ್ ರಾಂಜಿನ್ ಮತ್ತು ವೀ ಪಾಂಗ್ ಎರಡನೇ ಸುತ್ತಿನಲ್ಲಿ 387 ಅಂಕ ಗಳಿಸಿದರು ಮತ್ತು ರಷ್ಯಾದ ಒಲಿಂಪಿಕ್ ಸಮಿತಿಯ (ಆರ್‌ಒಸಿ) ವಿಟಲಿನಾ ಬಟ್ಸರಾಶ್ಕಿನಾ ಮತ್ತು ಆರ್ಟೆಮ್ ಚೆರ್ನೋಸೊವ್ 386 ಅಂಕಗಳನ್ನು ಗಳಿಸಿದರು.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: