ಮೈಸೂರು

ಸಮಾಜ ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಉತ್ತರ ನೀಡಲು ಒಪ್ಪಂದ

ಮೈಸೂರು,ಜು.27:- ಜೆ.ಎಸ್.ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯ, ಮೈಸೂರು ಮತ್ತು ‘Anthem Biosciences Pvt. Ltd.’’ ಬೆಂಗಳೂರು ನಡುವೆ ಒಪ್ಪಂದ (MoU) ಮಾಡಿಕೊಳ್ಳಲಾಗಿದೆ.

ಈ ಸಹಭಾಗಿತ್ವವು ಸಾಂಕೇತಿಕವಾಗಿ ಸಮಾಜ ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ತಾಂತ್ರಿಕವಾದ ಮತ್ತು ಸಮರ್ಪಕವಾದ ಉತ್ತರಗಳನ್ನು ಕಂಡುಕೊಳ್ಳುವುದು ಮತ್ತು ಜನಜೀವನ ಸುಧಾರಣೆಗೆ ಸಹಾಯಕವಾಗುತ್ತದೆ.

ಈ ಒಪ್ಪಂದವು ಸಹಕಾರ ವೃದ್ದಿ, ಶಿಕ್ಷಣ, ನೈಪುಣ್ಯಾಭಿವೃದ್ದಿ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಸದುದ್ದೇಶವನ್ನು ಹೊಂದಿದೆ. ‘‘Anthem Biosciences’ ಮತ್ತು “JSS STU” ಸಹಭಾಗಿತ್ವವು ಔಷಧ ವಿಜ್ಞಾನ, ಜೀವತಂತ್ರಜ್ಞಾನ, ವಿಶೇಷ ರಸಾಯನಿಕಗಳು ಮತ್ತು ವಸ್ತು ವಿಜ್ಞಾನದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲಿ ಪಾಲ್ಗೊಂಡು ಉನ್ನತಿ ಸಾಧಿಸುವ ಗುರಿ ಹೊಂದಿದೆ.

ಈ ಗುರಿ ಸಾಧಿಸುವುದಕ್ಕೆ ‘Anthem Biosciences’ ಉದ್ಯಮದ ಪ್ರಮುಖ ನೈಪುಣ್ಯ ಕ್ಷೇತ್ರಗಳಾದ ಆರ್ಗಾನಿಕ್ ಸಿಂಥಸಿಸ್, ಪ್ರೊಸಸ್ ಡೆವಲಪ್‍ಮೆಂಟ್, ಸಂಶ್ಲೇಷಣ ರಸಾಯನಶಾಸ್ತ್ರ, ಜೀವಶಾಸ್ತ್ರ ಸಂಶೋಧನೆಗಳ ಸಹಯೋಗವನ್ನು ಒದಗಿಸುತ್ತದೆ. ಈ ಸಂಬಂಧವಾಗಿ ‘Anthem Biosciences’ ಮತ್ತು “JSS STU” ಸಹಭಾಗಿತ್ವದಲ್ಲಿ ಪಾಲುದಾರರಾದ ನಾಗರೀಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮತ್ತು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಸದುದ್ದೇಶದಿಂದ ಈ MoU ವನ್ನು ‘Academia’ ಮತ್ತು ‘Industry’ಸಹಭಾಗಿತ್ವ ಯೋಜನೆಯಡಿ ಮಾಡಿಕೊಳ್ಳಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: