ಕರ್ನಾಟಕಪ್ರಮುಖ ಸುದ್ದಿ

ಉದ್ಯಮಶೀಲತಾ ಅರಿವು ಕಾರ್ಯಕ್ರಮ

ರಾಜ್ಯ(ಶಿವಮೊಗ್ಗ)ಜು.28:- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ಧಾರವಾಡ ಹಾಗೂ ಜನ ಶಿಕ್ಷಣ ಸಂಸ್ಥಾನ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜನ ಶಿಕ್ಷಣ ಸಂಸ್ಥಾನದ ಸಭಾಂಗಣ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದ್ದ “ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮ”ದ ಉದ್ಘಾಟನೆಯನ್ನು ಜನ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಪ್ರೂ. ಕಮಲಾಕರ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದಾವಣಗೆರೆಯ ಬಾಪೂಜಿ ಪಾಲಿಟೆಕ್ನಿಕ್ನ ಉಪನ್ಯಾಸಕ ಮಹೇಶ್ವರಪ್ಪ ಕೆ. ಎನ್. ಪಾಲ್ಗೊಂಡಿದ್ದರು. ಸಿಡಾಕ್(ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ), ದಾವಣಗೆರೆ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಪಾಲ್ಗೊಂಡಿದ್ದರು.
ತರಬೇತಿಯಲ್ಲಿ ತರಬೇತುದಾರರಾದ ವಿನಯ ಜಿ. ಕೆ. ನಿರೂಪಿಸಿದರು, ಜೆ.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸುಮನ ಎಂ, ಸ್ವಾಗತಿಸಿದರು, ತರಬೇತುದಾರ ಅವಿನಾಶ ಎ ಮತ್ತು ಜೆ ಎಸ್ ಎಸ್ ನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: