ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಸೋಲಿಗೆ ಶರಣಾದ ಭಾರತದ ಮಹಿಳಾ ಹಾಕಿ ತಂಡ

ವಿದೇಶ(ಟೋಕಿಯೊ)ಜು.28:-  ಭಾರತದ ಮಹಿಳಾ ಹಾಕಿ ತಂಡವು ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಹೊಂದಿರುವ ಹೊರತಾಗಿಯೂ  ಗ್ರೇಟ್ ಬ್ರಿಟನ್ ವಿರುದ್ಧ 1-4 ಗೋಲುಗಳ ಅಂತರದಲ್ಲಿ ಸೋಲಿಗೆ ಶರಣಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಮೂರನೇ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಮುಗ್ಗರಿಸಿತು.ಭಾರತದ ಪರ 23ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಈ ಪಂದ್ಯದಲ್ಲಿ ಭಾರತ ಕನಿಷ್ಠ ಒಂದು ಅಂಕವನ್ನಾದರೂ ಗಳಿಸಬೇಕಿತ್ತು. ಆದರೆ ಈಗ ಕ್ವಾರ್ಟರ್‌ಫೈನಲ್ ಹಂತವನ್ನು ತಲುಪಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಾಗಿರುವ ಭಾರತ ತಂಡವು ಕೊನೆಯ ಸ್ಥಾನದಲ್ಲಿದೆ.

ರಾಣಿ ರಾಂಪಾಲ್ ಪಡೆಯು ವಿಶ್ವ ನಂ.1 ರ‍್ಯಾಂಕ್‌ ನ ಹಾಲೆಂಡ್ ವಿರುದ್ಧ 1-5 ಮತ್ತು ಜರ್ಮನಿ ವಿರುದ್ಧ 0-2ರ ಗೋಲುಗಳ ಅಂತರದ ಸೋಲು ಅನುಭವಿಸಿತ್ತು. ಈಗ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಐರ್ಲೆಂಡ್ ಸವಾಲನ್ನು ಎದುರಿಸಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: