ಕರ್ನಾಟಕಪ್ರಮುಖ ಸುದ್ದಿ

ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ವರ್ಗಾವಣೆ

ರಾಜ್ಯ( ಮಡಿಕೇರಿ) ಜು.29:- ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಐಟಿಡಿಪಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಶಿವಕುಮಾರ್ ಅವರು ಮೈಸೂರಿನ ಗಿರಿಜನ ಸಂಶೋಧನಾ ಸಂಸ್ಥೆಗೆ ವರ್ಗಾವಣೆಗೊಂಡಿದ್ದಾರೆ.
ಕೊಡಗು ಜಿಲ್ಲೆ ಐಟಿಡಿಪಿ ಇಲಾಖೆಗೆ ನೂತನವಾಗಿ ಅಧಿಕಾರಿಯಾಗಿ ಆಗಮಿಸಿರುವ ಕೆ.ಶ್ರೀನಿವಾಸ್ ಅವರಿಗೆ ಬುಧವಾರ ಸಿ.ಶಿವಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: