ಕ್ರೀಡೆದೇಶಪ್ರಮುಖ ಸುದ್ದಿಮನರಂಜನೆ

ಒಲಂಪಿಕ್ ಪದಕ ವಿಜೇತೆ ಮೀರಾ ಚಾನುಗೆ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ

ದೇಶ( ನವದೆಹಲಿ)ಜು.29:- ಟೋಕಿಯೊ ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವೇಟ್‌ ಲಿಫ್ಟರ್ ಮೀರಾಬಾಯಿ ಚಾನುಗೆ ಸರ್ಕಾರಗಳು ಕೋಟ್ಯಂತರ ರೂಪಾಯಿಗಳ ಬಹುಮಾನ ಘೋಷಿಸುತ್ತಿವೆ. ಏತನ್ಮಧ್ಯೆ ಅವರು ಜೀವಿತಾವಧಿಗೆ ನೋಡಲು ಬಯಸಿದಷ್ಟು ಸಿನಿಮಾಗಳಿಗೆ ಉಚಿತ ಟಿಕೆಟ್‌ ಗಳನ್ನು ನೀಡುವ ಮೂಲಕ ಮೀರಾಬಾಯಿಯ ಐತಿಹಾಸಿಕ ಗೆಲುವನ್ನು ಮಲ್ಟಿಪ್ಲೆಕ್ಸ್ ಗಳು ಸ್ಮರಿಸಿವೆ.

ಒಲಂಪಿಕ್ ಕಣದಲ್ಲಿರುವ ಉಳಿದ ಭಾರತೀಯರಿಗೆ ಪ್ರೋತ್ಸಾಹಕವಾಗಿ, ಐನಾಕ್ಸ್ ಲೀಜರ್ ಲಿಮಿಟೆಡ್ ಪದಕದೊಂದಿಗೆ ಮನೆಗೆ ಮರಳುವ ಯಾವುದೇ ಕ್ರೀಡಾಪಟುಗಳಿಗೆ ಅದೇ ರೀತಿಯ ಕೊಡುಗೆ ನೀಡಲಿದೆ.

ಟೋಕಿಯೊದಲ್ಲಿ ಸ್ಪರ್ಧಿಸುತ್ತಿರುವ ಇತರ ಭಾರತೀಯ ಕ್ರೀಡಾಪಟುಗಳು ಸಹ ಕೊಡುಗೆಯಿಂದ ಹೊರಗುಳಿದಿಲ್ಲ. ದೇಶಾದ್ಯಂತ 648 ಮಲ್ಟಿಪ್ಲೆಕ್ಸ್‌ಗಳನ್ನು ನಿರ್ವಹಿಸುವ ಐನಾಕ್ಸ್, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಅರ್ಹತೆ ಪಡೆದ ಎಲ್ಲರಿಗೂ ಒಂದು ವರ್ಷದವರೆಗೆ ಉಚಿತ ಸಿನಿಮಾ ಟಿಕೆಟ್‌ಗಳನ್ನು ನೀಡುವುದಾಗಿ ಹೇಳಿದೆ.
ಟೋಕಿಯೊ ಒಲಂಪಿಕ್ಸ್ 2020ಯಲ್ಲಿ ಟೀಮ್‌ಇಂಡಿಯಾದ ಎಲ್ಲಾ ಪ್ರಯತ್ನಗಳಿಗೆ ಐನಾಕ್ಸ್ ಅಪಾರ ಹೆಮ್ಮೆ ಪಡುತ್ತದೆ. ಎಲ್ಲಾ ಪದಕ ವಿಜೇತರಿಗೆ ಜೀವಿತಾವಧಿಯಲ್ಲಿ ಉಚಿತ ಸಿನಿಮಾ ಟಿಕೆಟ್‌ಗಳನ್ನು ಘೋಷಿಸಲು ನಾವು ಸಂತೋಷಿಸುತ್ತೇವೆ. ಇತರ ಎಲ್ಲ ಕ್ರೀಡಾಪಟುಗಳಿಗೆ ಒಂದು ವರ್ಷ ಕಾಲ ಉಚಿತ ಟಿಕೆಟ್ ಘೋಷಿಸಿದ್ದು #AayegaIndia #INOXForTeamIndia #EkIndiaTeamIndia #Respect ಎಂದು ಟ್ವೀಟ್ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: