ಮೈಸೂರು

ಉದ್ಯಮಿಯೋರ್ವರ ಹೆಸರು ಹೇಳಿ ಹಣ ಪಡೆದು ವಂಚನೆ : ದೂರು

ಮೈಸೂರು,ಜು.29:- ಉದ್ಯಮಿಯೋರ್ವರ ಹೆಸರೇಳಿಕೊಂಡು ಹಣ ನೀಡುವಂತೆ ಕೇಳಿ ಹಣ ಪಡೆದು ಪರಾರಿಯಾಗುತ್ತಿರುವ ಕೃತ್ಯವೊಂದು ಮೈಸೂರು ಹಾಗೂ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉದ್ಯಮಿ ಗುರುರಾಜು ಎಂಬವರ ಹೆಸರನ್ನು ಹೇಳಿ ಅವರ ಪರಿಚಯವಿರುವ ಅಂಗಡಿಗಳಲ್ಲಿ ತನ್ನ ಕಾರು ಕೆಟ್ಟೋಗಿದೆ. ಪರ್ಸ್ ಬಿಟ್ಟು ಬದ್ದಿದ್ದೇನೆ, ತನ್ನ ಎಟಿಎಂ ಕಾರ್ಡ್ ವರ್ಕ್ ಆಗುತ್ತಿಲ್ಲ ಎಂಬಿತ್ಯಾದಿ ಸಬೂಬುಗಳನ್ನು ಹೇಳಿ  ಹಣ ಪಡೆದು ವಂಚಕರು ಪರಾರಿಯಾಗುತ್ತಿದ್ದಾರೆ. ಈ ಕುರಿತ ಆಡಿಯೋ ಹಾಗೂ ಸಿಸಿಟಿವಿ ಫೂಟೇಜ್ ಗಳು ಇದೀಗ ವೈರಲ್ ಆಗಿವೆ. ಮೈಸೂರಿನ ಮುಡಾದ ಮಾಜಿ ಅಧ್ಯಕ್ಷ ಗೋವಿಂದರಾಜು ಅವರ ಪುತ್ರ ಉದ್ಯಮಿ ಗುರುರಾಜು ಅವರ ಹೆಸರನ್ನು ಹೇಳಿಕೊಂಡು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವೈನ್ ಸ್ಟೋರ್ ಮತ್ತು ಬಾರ್ ಗಳಿಂದ ಹಣ ವಸೂಲಿ ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿರುವುದಾಗಿ ಗುರುರಾಜು ಅವರು ತಿಳಿಸಿದ್ದು ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ. ಇನ್ನು ಮುಂದೆ ಅಂತಹ ಯಾವುದೇ ಕರೆಗಳು ಯಾರಿಂದಲಾದರೂ ಬಂದರೆ ಕೂಡಲೇ ಮೊ.ಸಂ.9886133333 ಗೆ ಕರೆ ಮಾಡಿ ತಿಳಿಸಿ ಕರೆ ಮಾಡಿದವರ ಹೆಸರು ಹಾಗೂ ಮೊಬೈಲ್ ನಂಬರ್ ನೀಡುವಂತೆ ಕೋರಿದ್ದಾರೆ. ಯಾರೂ ಕೂಡ ಹಣ ನೀಡದಂತೆಯೂ ವಿನಂತಿಸಿದ್ದಾರೆ.

ಈ ಕುರಿತು ನಜರ್ ಬಾದ್ ಹಾಗೂ ಚಾಮರಾಜನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: