ಮೈಸೂರು

ಎನ್ ಟಿ.ಎಂ ಶಾಲೆ ಉಳಿಸಿ ಹೋರಾಟ ಮೂವತ್ತೊಂದನೆಯ ದಿನಕ್ಕೆ

ಮೈಸೂರು,ಜು.29:- ಎನ್ ಟಿ.ಎಂ ಶಾಲೆ ಉಳಿಸಿ ಹೋರಾಟ ಮೂವತ್ತೊಂದನೆಯ ದಿನಕ್ಕೆ ಕಾಲಿರಿಸಿದೆ.

ವಿವಿಧ ಸಂಘಟನೆಗಳ ಮುಖಂಡರು ಹೋರಾಟ ಮುಂದುವರಿಸಿದ್ದಾರೆ. ಕನ್ನಡ ಶಾಲೆಯ ಸಮಾಧಿಯ ಮೇಲೆ ನನ್ನ ಸ್ಮಾರಕ ನಿರ್ಮಾನ ಬೇಡ ಎಂಬ ಭಿತ್ತಿ ಪತ್ರವನ್ನು ಪ್ರದರ್ಶಿಸಿದರು. ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ ಎಂದರು. ಶಾಲೆ ಉಳಿವಿಗಾಗಿ ನಿರಂತರ ಹೋರಾಟ‌ ನಡೆಸಲಾಗುತ್ತಿದೆ. ಕನ್ನಡ ಶಾಲೆ ಮುಚ್ಚಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಶಾಲೆಯೂ ಇರಲಿ, ಸ್ಮಾರಕವು ಇರಲಿ. ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಿ ಶಾಲೆ ಮುಚ್ಚುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

Leave a Reply

comments

Related Articles

error: