ಪ್ರಮುಖ ಸುದ್ದಿ

ವಿಶ್ವ ಹುಲಿ ದಿನ ಪ್ರಯುಕ್ತ ಹುಲಿ ರಕ್ಷಣೆಗೆ ಕರೆ ನೀಡಿದ ಸಿಎಂ, ನಟ ದರ್ಶನ್ ಸೇರಿದಂತೆ ಗಣ್ಯರ ಕರೆ

ರಾಜ್ಯ(ಬೆಂಗಳೂರು)ಜು.29:- ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ಸದಾ ಮುಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ವಿಶ್ವಹುಲಿದಿನಾಚರಣೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಇಂದು ವಿಶ್ವ ಹುಲಿ ದಿನ. ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ, ಅವುಗಳ ನೈಸರ್ಗಿಕ ಆವಾಸ್ಥಾನಗಳ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ದೃಢಸಂಕಲ್ಪ ನಮ್ಮೆಲರದ್ದಾಗಲಿ. ವಿಶ್ವದಲ್ಲಿ ಅತಿ ಹೆಚ್ಚು ಹುಲಿಗಳಿರುವ ಭಾರತದಲ್ಲಿ ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ಸದಾ ಮುಂದಿದೆ ಎಂದಿದ್ದಾರೆ.

ನಟ ದರ್ಶನ್ ತಮ್ಮ ಟ್ವಿಟರ್ ನಲ್ಲಿ ವಿಶ್ವ ಹುಲಿ ದಿನ. ಹುಲಿ ಸಂರಕ್ಷಣೆ ಹಾಗೂ ಹುಲಿಗಳ ನೈಸರ್ಗಿಕ ನೆಲೆವೀಡು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 29ರಂದು ಹುಲಿ ದಿನವನ್ನು ಆಚರಿಸಲಾಗುತ್ತದೆ. ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹುಲಿ ಸಂತತಿಯನ್ನು ನಾವೆಲ್ಲರೂ ರಕ್ಷಿಸೋಣ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅನೇಕ ಗಣ್ಯರು ಕೂಡ ಹುಲಿ ಸಂರಕ್ಷಣೆಗೆ ಕರೆ ನೀಡಿದ್ದಾರೆ.

Leave a Reply

comments

Related Articles

error: