ಮೈಸೂರು

ಅತ್ಯಾಚಾರಿ ಚಿಕ್ಕಪ್ಪನ ಬಂಧನ

ಅಪ್ರಾಪ್ತಳನ್ನ ಅಪಹರಿಸಿ ಅತ್ಯಾಚಾರವೆಸಗಿದ ಚಿಕ್ಕಪ್ಪನನ್ನು ಬಂಧಿಸುವಲ್ಲಿ ಮೈಸೂರಿನ  ಎನ್.ಆರ್. ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಕಿರಣ್(26)ಎಂದು ಗುರುತಿಸಲಾಗಿದೆ. ಕೆ.ಆರ್.ಮಿಲ್ ನಿವಾಸಿಯಾದ  ಈತ  ಕೆಲ ದಿನಗಳಿಂದ ಮೈಸೂರಿನ ಹಳೆ ಕೆಸರೆ  ಬಡಾವಣೆಯಲ್ಲಿನ ತನ್ನ ಅಣ್ಣ ಮನೆಯಲ್ಲಿ ವಾಸವಿದ್ದ. ಈ ವೇಳೆ  16ರ ವಯೋಮಾನದ ಅಣ್ಣನ  ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ನಾಪತ್ತೆಯಾಗಿದ್ದ.

ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: