ಮೈಸೂರು

ತೆರಿಗೆ ಪಾವತಿಸದೇ ಇದ್ದ ಐಷಾರಾಮಿ ಬಸ್ ಗಳನ್ನು ವಶಕ್ಕೆ ಪಡೆದ ಆರ್ ಟಿಒ ಅಧಿಕಾರಿಗಳು

ಮೈಸೂರು,ಜು.29:- ನಂಜನಗೂಡಿನ ಆರ್ ಟಿ ಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ತೆರಿಗೆ ಪಾವತಿಸದೇ ಇದ್ದ ಐಷಾರಾಮಿ ಬಸ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತೆರಿಗೆ ಪಾವತಿಸದೆ ಈ ಐಷಾರಾಮಿ ಬಸ್ ಗಳು ಸಂಚರಿಸುತ್ತಿತ್ತು ಎನ್ನಲಾಗಿದೆ. ತೆರಿಗೆ ಮತ್ತು ವಿಮೆ ಪಾವತಿಸದೆ ಸಂಚರಿಸುತ್ತಿದ್ದ ಆರು ಐಷಾರಾಮಿ ಬಸ್ ಗಳನ್ನು ಆರ್ ಟಿ ಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಬಸ್ ನ್ನು ವಶಕ್ಕೆ ಪಡೆದಿದ್ದಾರೆ. ಜ್ಯುಬಿಲಿಯೆಂಟ್ ಕಾರ್ಮಿಕರ ಸೇವೆಗಾಗಿ ಈ ಬಸ್ ಸಂಚರಿಸುತ್ತಿತ್ತು ಎನ್ನಲಾಗಿದೆ. ಪಂಚಲಿಂಗೇಶ್ವರ ಪ್ರವೇಟ್ ಲಿಮಿಟೆಡ್ ಗೆ ಈ ಬಸ್ ಗಳು ಸೇರಿತ್ತು ಎನ್ನಲಾಗಿದ್ದು, ಕಳೆದೈದು ವರ್ಷಗಳಿಂದ ಸರ್ಕಾರಕ್ಕೆ ತೆರಿಗೆ ಹಣ ಮತ್ತು ವಿಮೆ ಪಾವತಿ ಮಾಡಿರಲಿಲ್ಲ. ಈ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರನ್ನು ಆಧರಿಸಿ ಆರ್ ಟಿ ಓ ಅಧಿಕಾರಿಗಳು ಪರಿಶೀಲನೆ ನಡೆಸಲಾಗಿ ತೆರಿಗೆ ವಂಚನೆ ಮಾಡಿರುವುದು ಮತ್ತು ವಿಮೆ ಕಟ್ಟದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಆರ್ ಟಿ ಓ ಅಧಿಕಾರಿಗಳು ನಂಜನಗೂಡು ಸಂಚಾರಿ ಠಾಣೆಯ ಪೊಲೀಸರೊಂದಿಗೆ ತೆರಳಿ 6ಬಸ್ ಗಳನ್ನು ಸೀಜ್ ಮಾಡಿದ್ದಾರೆ. 14ಬಸ್ ಗಳನ್ನು ಬಳಸುತ್ತಿದ್ದ ಮಾಲೀಕ 8ಬಸ್ ಗಳನ್ನು ಮರೆ ಮಾಚಿರುವ ಆರೋಪ ಕೂಡ ಕೇಳಿ ಬಂದಿದೆ. ಬಸ್ ಮಾಲಿಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು ದಾರ ಆಗ್ರಹಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: