ಮೈಸೂರು

ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಉರುಳು ಸೇವೆ ಸೋಮು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮೈಸೂರು,ಜು.29:- ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಉರುಳು ಸೇವೆ ಸೋಮು ಅವರಿಗೆ ಬಂಡಿಕೇರಿ ಬಳಗ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ,ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಅಪ್ಪಟ ಶಿಷ್ಯನಾಗಿ ಗುರುತಿಸಿಕೊಂಡು ಎಂ ಕೆ ಸೋಮಶೇಖರ್ ಅವರ ಗೆಲುವಿಗಾಗಿ ಚಾಮುಂಡಿ ಬೆಟ್ಟದಲ್ಲಿ ಉರುಳು ಸೇವೆ ಮಾಡುವ ಮೂಲಕ ಮೈಸೂರು ನಗರದಲ್ಲಿ “ಉರುಳು ಸೇವೆ ಸೋಮ “ಎಂದೇ ಪ್ರಚಲಿತರಾಗಿದ್ದ ಸಿದ್ದರಾಮಯ್ಯನವರ ಪರಮ ಭಕ್ತನೂ ಆಗಿದ್ದ ಹೊಸಬಂಡಿಕೇರಿಯ ದಿ.ಸೋಮು ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಂಡಿಕೇರಿಯ 24ಮನೆ ತೆಲುಗುಶೆಟ್ಟರ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಸೋಮು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್, ಎನ್ ಸುನೀಲ್ ಕುಮಾರ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷರಾದ ಬಸಪ್ಪ,ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಲಾರಿ ರೇವಣ್ಣ,ನಮ್ಮ ಮೈಸೂರು ಫೌಂಡೇಶನ್ ನ ಮಲ್ಲೇಶ್,   ಕಾಂಗ್ರೆಸ್ ಹಿರಿಯ ಮುಖಂಡರಾಜ ವಿಜಯ್ ಕುಮಾರ್,ಪುಟ್ಟಸ್ವಾಮಿ,ಕನಕದಾಸ ಪತ್ತಿನ ಸಂಘದ ನಿರ್ದೇಶಕ ಚೇತನ್,ಸೋಮು ಅವರ ಸಹೋದರರಾದ ಪುಟ್ಟಣ್ಣ,ಕೃಷ್ಣ,ಮಹೇಶ್,ಗುಣಶೇಖರ್,ರಾಘು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: