ದೇಶಪ್ರಮುಖ ಸುದ್ದಿ

ಭೂಗತ ಪಾತಕಿ ಛೋಟಾ ರಾಜನ್ ಏಮ್ಸ್ ಆಸ್ಪತ್ರೆಗೆ ದಾಖಲು

ನವದೆಹಲಿ,ಜು.29-ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಾಗಿದ್ದಾರೆ.

ರಾಜನ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ. ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ.

ತಿಹಾರ್ ಜೈಲಿನಲ್ಲಿರುವ 61 ವರ್ಷದ ರಾಜನ್ ಗೆ ಎರಡು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 24 ರಂದು ಏಮ್ಸ್ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಛೋಟಾ ರಾಜನ್ ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಪಡಿಸಿ ದೆಹಲಿಯ ಹೈ ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: