ಮೈಸೂರು

ಅಪರಿಚಿತ ಶವ ಪತ್ತೆ

ಮೈಸೂರು, ಜು.29 :- ಪಾಂಡವಪುರ-ಶ್ರೀರಂಗಪಟ್ಟಣ ರೈಲು ನಿಲ್ದಾಣಗಳ ನಡುವೆ ರೈಲ್ವೆ ಕಿ.ಮೀ. ನಂ.122/200-300ರಲ್ಲಿ ಜುಲೈ 28 ರಂದು ಸುಮಾರು 50-55ವರ್ಷದ ಗಂಡಸಿನ ಅಪರಿಚಿತ ಶವ ಪತ್ತೆಯಾಗಿದೆ.
ಮೃತರ ಪಾರ್ಥಿವ ಶರೀರ ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಕಲಂ-174ರ ಅನ್ವಯ ಪ್ರಕರಣ ದಾಖಲಾಗಿದೆ.
ಮೃತರ ಚಹರೆ ಇಂತಿದೆ
ಸುಮಾರು 5.6 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ 02.1/2 ಇಂಚು ಉದ್ದದ ಕಪ್ಪು ಬಿಳಿ ಕೂದಲು ಮತ್ತು 01 ಇಂಚು ಉದ್ದ ಮೀಸೆ ಇದ್ದು, ಗಡ್ಡವನ್ನು ಶೇವಿಂಗ್ ಮಾಡಿರುತ್ತಾರೆ.
ವಾರಸುದಾರರಿದ್ದಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ.ಸಂ:0821-2516579 ಸಂಪರ್ಕಿಸುವಂತೆ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: