ಮೈಸೂರು

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು,ಜು. 29 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ರಾಮಕೃಷ್ಣನಗರ ಉಪವಿಭಾಗದ 66/11 ಕೆ.ವಿ ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ದ್ವಾರಕ ಮತ್ತು 11 ಕೆ.ವಿ ದೇವಗಳ್ಳಿ ಎನ್.ಜೆ.ವೈ ವಿದ್ಯುತ್ ಮಾರ್ಗದಲ್ಲಿ ಜುಲೈ 31ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ದಟ್ಟಗಳ್ಳಿ 3ನೇ ಹಂತ, ದಟ್ಟಗಳ್ಳಿ ರಿಂಗ್ ರೋಡ್, ಆರ್.ಟಿ ನಗರ, ಜಿ9 ಲೇಔಟ್, ಕೆ.ಬಿ.ಎಲ್ ಲೇಔಟ್, ಮೂಗನಹುಂಡಿ, ನಗರತಹಳ್ಳಿ, ಯಡ್ಡಹಳ್ಳಿ, ದೇವಗಳ್ಳಿ, ಬಲ್ಲಹಳ್ಳಿ, ತಿಬ್ಬಯ್ಯನಹುಂಡಿ, ಅನಗಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯೆಯವಾಗಲಿದೆ ಎಂದು ವಿ.ವಿ ಮೊಹಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಚಿಕ್ಕಸಿದ್ದೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

comments

Related Articles

error: