ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೋಕಿಯೋ ಒಲಂಪಿಕ್ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ದೀಪಿಕಾ ಕುಮಾರಿ

ವಿದೇಶ( ಟೋಕಿಯೊ)ಜು.30:- ಟೋಕಿಯೊ ಒಲಂಪಿಕ್ಸ್‌ನ 8ನೇ ದಿನವಾದ ಶುಕ್ರವಾರ ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರಷ್ಯಾ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದೀಪಿಕಾ ಕುಮಾರಿ ಜಯ ಸಾಧಿಸಿದ್ದಾರೆ.

ರಷ್ಯಾ ಒಲಿಂಪಿಕ್ ಕಮಿಟಿಯ ಕ್ಸೆನಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ದೀಪಿಕಾ ಕುಮಾರಿ ಜಯ ಸಾಧಿಸಿದರು.

ಮೊದಲು ನಡೆದ 5 ಸುತ್ತುಗಳಲ್ಲಿ ಕ್ಸೆನಿಯಾ ವಿರುದ್ಧ ದೀಪಿಕಾ ಕುಮಾರಿ 28-25, 26-27, 28-27, 26-26 ಹಾಗೂ 25-28 ಅಂಕಗಳನ್ನು ಗಳಿಸಿದರು. ಈ ಮೂಲಕ ಇಬ್ಬರ ನಡುವಿನ ಪಂದ್ಯದಲ್ಲಿ ಸಮಬಲ ಬಂದ ಕಾರಣ ಮತ್ತೊಂದು ಅತ್ಯಧಿಕ ಶೂಟ್ ಆಫ್ ಸುತ್ತನ್ನು ಆಯೋಜಿಸಲಾಗಿತ್ತು.

ಈ ಶೂಟ್ ಆಫ್ ಸುತ್ತಿನಲ್ಲಿ ಕ್ಸೆನಿಯಾ ಪೆರೋವಾಗಿಂತ ಹೆಚ್ಚು ಅಂಕಗಳನ್ನು ಗಳಿಸಿದ ದೀಪಿಕಾ ಕುಮಾರಿ ಪಂದ್ಯವನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ನ್ನು ಪ್ರವೇಶಿಸಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: