ಪ್ರಮುಖ ಸುದ್ದಿಮೈಸೂರು

ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ :ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು,ಜು.30:-  ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನೂತನ ಸಚಿವ ಸಂಪುಟದಲ್ಲಿ ಇರಬೇಕಾ ಬೇಡವಾ ಎಂಬುದು ನಾನು ತೆಗೆದುಕೊಳ್ಳುವ ನಿರ್ಧಾರವಲ್ಲ. ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ.  ಸಿಎಂ ರಾಜ್ಯಧ್ಯಕ್ಷ ಹಾಗೂ ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಜಗದೀಶ್ ಶೆಟ್ಟರ್ ಅವರು ಹಿರಿಯರಾಗಿದ್ದಾರೆ. ತಮ್ಮ ಜೂನಿಯರ್ ಕೆಳಗೆ ಸಂಪುಟದಲ್ಲಿ ಇರುವುದಿಲ್ಲ ಎನ್ನುವ ತೀರ್ಮಾನ ಮಾಡಿದ್ದಾರೆ. ಇದಕ್ಕೂ ಕಟೀಲ್ ಅವರದ್ದು ಎನ್ನುವ ಆಡಿಯೋ ಕ್ಕೂ ಸಂಬಂಧ ಇಲ್ಲ ಎಂದರು.

ನನ್ನ ಪರವಾಗಿ ಸ್ವಾಮೀಜಿಗಳು ಸ್ನೇಹಿತರು ನನ್ನ ಪರವಾಗಿ ಮಾತನಾಡುತ್ತಾರೆ ಇದು ಖುಷಿ. ನಾನು ಸಚಿವನಾಗಬೇಕು, ಡಿಸಿಎಂ, ಸಿಎಂ‌ ಆಗಬೇಕು ಅಂತ ಅಪೇಕ್ಷೆ ಪಡುತ್ತಾರೆ. ನಾನು ರಾಜಕಾರಣಿ, ರಾಜಕಾರಣಿಗೆ ನಿರೀಕ್ಷೆ ಇರುತ್ತೆ. ಆದರೆ ಕೇಂದ್ರ ನಾಯಕರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: