ಮೈಸೂರು

ನೋಂದಾಯಿತ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ

ಮೈಸೂರು,ಜು.30:-  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-19ರ ಸಂಕಷ್ಟದಲ್ಲಿರುವ ನೋಂದಾಯಿತ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಲಾಯಿತು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಫುಡ್ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಸುರಕ್ಷಾ ಭವನದ ವತಿಯಿಂದ ರಾಜ್ಯ ಸರ್ಕಾರ ಹಿಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕಟ್ಟಡ ಕಾರ್ಮಿಕರಿಗೆ ಪ್ರತಿಯೊಬ್ಬ ಕಾರ್ಮಿಕರಿಗೂ ಕಿಟ್ ನ್ನು ಕೊಡಬೇಕು ಎಂದಿದ್ದರು. ಕಾರ್ಮಿಕ ಇಲಾಖೆಯ ವತಿಯಿಂದ ಇವತ್ತು ನೀಡಲಾಗುತ್ತಿದೆ. ಇಲಾಖೆಗೆ ಒಳ್ಳೆಯ ಅಧಿಕಾರಿ ಸಿಕ್ಕಿದ್ದಾರೆ. ಅವರ ಶ್ರಮದಿಂದ ಕಿಟ್ ಸಿಗುತ್ತಿದೆ ಎಂದರು.    ಪಾರ್ಲಿಮೆಂಟ್ ಸದಸ್ಯರು ಒಂದು ಸಾವಿರ ಕೊಟ್ಟಿದ್ದಾರೆ. ಐದೂವರೆ ಸಾವಿರ ತಾವು ನೀಡುತ್ತಿರುವುದಾಗಿ ಶಾಸಕರು ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಕಷ್ಟಪಟ್ಟಿದ್ದಾರೆ. ಕಟ್ಟಡ ಕಟ್ಟಬೇಕಾದರೆ ನಿಮ್ಮ ಶ್ರಮ ಗುರುತಿಸಿ ನಿಮಗೆ ಅನುಕೂಲವಾಗಲಿ ಅಂತ ಫುಡ್ ಕಿಟ್ ನೀಡುತ್ತಿದ್ದೇವೆ.  ಮಂಜುನಾಥಪುರ, ಕೈಲಾಸಪುರದಿಂದ ಕೂಡ ಕಾರ್ಮಿಕರು ಬಂದಿದ್ದೀರಿ. ಆಷಾಢದ ಮೂರನೇ ಶುಕ್ರವಾರ ತಾಯಿ ಚಾಮುಂಡೇಶ್ವರಿ ಒಳ್ಳೆಯದನ್ನು ಮಾಡಲಿ. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರಿಗೆ 3600ಕುಟುಂಬಗಳಿಗೆ 2ಸಾವಿರ ರೂ.ವನ್ನು ಖಾತೆಗಳಿಗೆ ಹಾಕಿಸಿದ್ದೇನೆ. ಪಾಲಿಕೆ ಸದಸ್ಯರು ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ. ಯಾರಾದರೂ ಬಾಕಿ ಇದ್ದಲ್ಲಿ ಅರ್ಜಿ ಹಾಕಿ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ತಿಳಿಸಿದರು.

ಕಿಟ್  ಐದು ಕೆಜಿ ಅಕ್ಕಿ, ಸನ್ ಪ್ಯೂರ್ ಆಯಿಲ್ 1ಲೀ, ತೊಗರಿಬೇಳೆ 1ಕೆಜಿ, ಸಕ್ಕರೆ 1ಕೆಜಿ, ರವೆ ಒಂದು ಕೆಜಿ, ಗೋಧಿ ಹಿಟ್ಟು 2ಕೆಜಿ,ಖಾರದ ಪುಡಿ, ಉಪ್ಪು 1ಕೆಜಿ, ಸಾಂಬಾರ ಪುಡಿ ಇತ್ಯಾದಿಗಳನ್ನು  ಒಳಗೊಂಡಿದೆ.

ಚಾಮರಾಜವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ಆರೂವರೆ ಸಾವಿರ ಮಂದಿ ಕಟ್ಟಡ ಕಾರ್ಮಿಕರಿಗೆ ಇಂದು ಫುಡ್ ಕಿಟ್ ನೀಡಲಾಯಿತು.

ಈ ಸಂದರ್ಭ ಚಾಮರಾಜಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ್ ರಾಜು, ಸತೀಶ್,  ಪಾಲಿಕೆ ಸದಸ್ಯರಾದ ಸುಬ್ಬಯ್ಯ, ರಂಗಸ್ವಾಮಿ, ರವೀಂದ್ರ, ಪ್ರಮೀಳಾ ಭರತ್, ವೇದಾವತಿ ಚಿಕ್ಕವೆಂಕಟು, ರಾಜು. ಮಣಿ, ವೆಂಕಟೇಶ್, ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

 

 

 

Leave a Reply

comments

Related Articles

error: