ಮೈಸೂರು

ತಹಶೀಲ್ದಾರ್ ಗೆ ವಾರೆಂಟ್ ಜಾರಿ

ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಯಾಗಿದೆ.

ಮೈಸೂರು ತಾಲೂಕು ವರುಣ ಹೋಬಳಿ ಲಲಿತಾದ್ರಿಪುರ ಗ್ರಾಮ ಸರ್ವೆ ನಂ.28/29 ರ 2 ಎಕ್ರೆ ಜಮೀನು ವಿವಾದ ವಿಚಾರವಾಗಿ  ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಪಂಗಡಗಳ ಆಯೋಗದಿಂದ ಸಮನ್ಸ್ ಜಾರಿ ಆಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆಯೋಗ ವಾರೆಂಟ್ ಜಾರಿ ಮಾಡಿದೆ.

ಮೈಸೂರು ಪೊಲೀಸ್ ವರಿಷ್ಠಾಧಿಕಾರಿಯವರ  ಮೂಲಕ ವಾರೆಂಟ್ ಜಾರಿಯಾಗಿದೆ ಎನ್ನಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: