ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೊಕಿಯೋ ಒಲಂಪಿಕ್ :  ಆರ್ಚರಿಯಲ್ಲಿ  ಅತನುದಾಸ್ ಪರಾಭವ

ವಿದೇಶ(ಟೋಕಿಯೋ)ಜು.31:-  ಭಾರತದ   ಆರ್ಚರಿ ಪಟು ಅತನು ದಾಸ್ ಪರಾಭವ ಗೊಳ್ಳುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಆರ್ಚರಿ ವಿಭಾಗದಲ್ಲಿ ದೇಶದ ಬಿಲ್ಲುಗಾರರು ಬರಿಗೈಯಲ್ಲಿ ಮರಳಿದ್ದಾರೆ.

ಪುರುಷರ ವೈಯುಕ್ತಿಕ ವಿಭಾಗದ ಪ್ರೀ-ಕ್ವಾರ್ಟರ್‌ ಫೈನಲ್‌ ನಲ್ಲಿ ಅತನು ದಾಸ್, ಸ್ಥಳೀಯ ಫೇವರಿಟ್ ತಕಹರು ಫುರುಕಾವ ವಿರುದ್ಧ 6-4ರ ಅಂತರದಿಂದ ಸೋಲು ಅನುಭವಿಸಿದರು.  1/32ರ ಎಲಿಮಿನೇಷನ್ ಸುತ್ತಿನಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆರ್ಚರಿಪಟು ಜಿನ್ ಹಿಯೆಕ್ ವಿರುದ್ಧ ಗೆಲುವು ದಾಖಲಿಸಿದ ಅತನು ದಾಸ್ ಅವರಿಗೆ ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಅವರಿಗೂ ಮೂರನೇ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ. ವಿಶ್ವದ ಅಗ್ರ ಶ್ರೇಯಾಂಕಿತೆ ಆಗಿರುವ ಹೊರತಾಗಿಯೂ ಕ್ವಾರ್ಟರ್ ಫೈನಲ್ ಹಂತದಿಂದಲೇ ಹೊರಬಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: