ದೇಶಪ್ರಮುಖ ಸುದ್ದಿ

ಗಡಿ ವಿವಾದ : ಇಂದು ಭಾರತ-ಚೀನಾ ಸೇನಾ ಕಮಾಂಡರ್‌ಗಳ ನಡುವೆ 12 ನೇ ಸುತ್ತಿನ ಮಹತ್ವದ ಸಭೆ

ದೇಶ(ನವದೆಹಲಿ)ಜು.31:- ಭಾರತ ಮತ್ತು ಚೀನಾದ ಸೇನಾ ಕಮಾಂಡರ್‌ ಗಳ ನಡುವಿನ 12 ನೇ ಸುತ್ತಿನ ಮಹತ್ವದ ಸಭೆ ಇಂದು ನಡೆಯಲಿದೆ.

ಭೇಟಿಯ ಸಮಯದಲ್ಲಿ ದೇಶಗಳ ಮಿಲಿಟರಿ ಕಮಾಂಡರ್‌ ಗಳು ಮುಂದಿನ ಸುತ್ತಿನ ನಿರ್ಲಿಪ್ತತೆಯ ಬಗ್ಗೆ ಚರ್ಚಿಸುತ್ತಾರೆ. ಈ ಸಭೆಯು ಚೀನಾದ ಬದಿಯಲ್ಲಿರುವ ಎಲ್ ಎ ಸಿ ಮೊಲ್ಡೊ ಗ್ಯಾರಿಸನ್‌ ನಲ್ಲಿ   ಬೆಳಿಗ್ಗೆ 10.30 ಕ್ಕೆ ಆರಂಭವಾಗುತ್ತದೆ. ಮಾಹಿತಿಯ ಪ್ರಕಾರ  ಶನಿವಾರ ಬೆಳಿಗ್ಗೆ ನಡೆಯಲಿರುವ ಈ ಸಭೆಯಲ್ಲಿ, ವಿವಾದಿತ ಪ್ರದೇಶಗಳಾದ ಗೋಗ್ರಾ ಮತ್ತು ನಿಯಂತ್ರಣ ರೇಖೆಯ ಹಾಟ್-ಸ್ಪ್ರಿಂಗ್ ಅಂದರೆ ಪೂರ್ವ ಲಡಾಖ್ ಪಕ್ಕದ ಎಲ್ಎಸಿ ಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಕುರಿತು ಮಾತುಕತೆ ನಡೆಯಲಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: