ಕರ್ನಾಟಕಪ್ರಮುಖ ಸುದ್ದಿ

ಕುಂದಾಪುರ: ಫೈನಾನ್ಸ್ ಕಚೇರಿಯಲ್ಲೇ ಮಾಲೀಕನ ಕತ್ತು ಸೀಳಿ ಕೊಲೆ

ಕುಂದಾಪುರ,ಜು.31ಕೋಟೇಶ್ವರ ಸಮೀಪದ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್ ನಲ್ಲಿ ಫೈನಾನ್ಸಿಯರ್  ವೊಬ್ಬರ ಹತ್ಯೆ ನಡೆದಿದೆ.

ಯಡ್ಯಾಡಿ-ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ(33) ಹತ್ಯೆಯಾದವರು. ಅಜೇಂದ್ರ ರಾತ್ರಿಯಾದರು ಮನೆಗೆ ಬಾರದಿದ್ದರಿಂದ ಮನೆಯವರು ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಸ್ನೇಹಿತರಿಗೆ ಫೋನ್ ಮಾಡಿ ಕಾಳಾವರಕ್ಕೆ ಬಂದು ನೋಡಿದಾಗ ಅಜೇಂದ್ರ ರಕ್ತ ಮಡುವಿನಲ್ಲಿ ಕಚೇರಿಯಲ್ಲಿ ಬಿದ್ದಿದ್ದರು.

ತಕ್ಷಣ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅಜೇಂದ್ರ ಮೃತಪಟ್ಟಿದ್ದರು. ಅವರ ಕತ್ತು ಕೊಯ್ದಿರುವುದು ಮೇಲ್ನೋಟಕ್ಕೆ ಕಂಡು ಬಂದ್ದಿದೆ.

ಅಜೇಂದ್ರ ಶೆಟ್ಟಿ ಅನೂಪ್‌ ನೊಂದಿಗೆ ಪಾಲುದಾರಿಕೆಯಲ್ಲಿ ಫೈನಾನ್ಸ್‌ ವ್ಯವಹಾರ ನಡೆಸಿಕೊಂಡಿದ್ದರು. ಘಟನೆ ಬಳಿಕ ಅನೂಪ್‌ನಿಗೆ ಪೋನ್‌ ಮಾಡಿದಾಗ ಆತನ ಪೋನ್‌ ಸ್ವಿಚ್‌ಅಪ್‌ ಆಗಿದೆ. ಪಕ್ಕದ ಅಂಗಡಿಯವರಲ್ಲಿ ವಿಚಾರಿಸಿದಾಗ ಅನೂಪ್‌ ಮತ್ತು ಅಜೇಂದ್ರನು ರಾತ್ರಿ 8.30 ಗಂಟೆ ತನಕ ಪೈನಾನ್ಸ್‌ ನಲ್ಲಿ ಒಟ್ಟಿಗೆ ಇದ್ದರು ಎನ್ನಲಾಗಿದೆ.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೈನಾನ್ಸ್‌ ಹಣಕಾಸು ವಿಚಾರದಲ್ಲಿ ತಲೆದೋರಿರುವ ಮನಸ್ತಾವವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ತನಿಖೆ ನಡೆಯುತ್ತಿದೆ. (ಎಂ.ಎನ್)

Leave a Reply

comments

Related Articles

error: