ಸುದ್ದಿ ಸಂಕ್ಷಿಪ್ತ

ಕರ್ತವ್ಯನಿರತ ಗೃಹ ರಕ್ಷಕ ಸಿಬ್ಬಂದಿಗಳ ಮರು ನೋಂದಣಿ ಪ್ರಕ್ರಿಯೆ

ಮೈಸೂರು, ಜು. 31 :- ಮೈಸೂರು ಜಿಲ್ಲಾ ಗೃಹರಕ್ಷಕದಳ ಕಾರ್ಯಾಲಯದ ಹಾಲಿ ಕರ್ತವ್ಯನಿರತ ಗೃಹ ರಕ್ಷಕ ಸಿಬ್ಬಂದಿಗಳ ಮರು ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ನಿಗದಿತ ಅರ್ಜಿಯನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ಅಥವಾ ಮೈಸೂರು ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 15ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಮರುನೊಂದಣಿ ಪ್ರಕ್ರಿಯೆಯು ಹಾಲಿ ಸ್ವಯಂ ಸೇವಕರು ನಿಗದಿತ ಅರ್ಜಿನಮೂನೆಯನ್ನು ‘ಸಿ’ ಫಾರಂ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, ತಾಂತ್ರಿಕ ವಿದ್ಯಾರ್ಹತೆ, ಜನ್ಮ ದಿನಾಂಕ ಧೃಡಿಕರಿಸುವ ಶಾಲಾ ದಾಖಲಾತಿ ಅಥವಾ ಅಂಕ ಪಟ್ಟಿ, ಸರ್ಕಾರಿ ಅರೆಸರ್ಕಾರಿ ಇತರೆ ಖಾಸಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ ದೃಢೀಕೃತ ದಾಖಲೆ ಮತ್ತು ವಿಳಾಸ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು
ಈ ನೊಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವ ಸಿಬ್ಬಂದಿಗಳನ್ನು ಇಲಾಖೆಯ ನಿಯಮದಂತೆ ಸ್ವಯಂ ಸೇವಕ ನೋದಣಿಯಿಂದ ಕೈಬಿಡಲಾಗುವುದು. ಶಾರೀರಿಕ ಮತು ಮಾನಸಿಕ ಸುಸ್ಥಿತಿಯ ಬಗ್ಗೆ ವೈದ್ಯರಿಂದ ಪಡೆದ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಮರುನೊಂದಣಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಯಾವುದೇ ತಿದ್ದುಪಡಿ ಮತ್ತು ತೀರ್ಮಾನವು ಸಮಾದೇಷ್ಟರ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

Check Also

Close
error: