ಸುದ್ದಿ ಸಂಕ್ಷಿಪ್ತ

ಸಖಿ ಒನ್‌ಸ್ಟಾಪ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

ಮೈಸೂರು, ಜು. 31 :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ದೌರ್ಜನ್ಯಕೊಳ್ಳಕ್ಕಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು ಹಾಗೂ ಕಾನೂನಿನ ನೆರವು ಹಾಗೂ ಆಪ್ತ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸುವ ಸಲುವಾಗಿ ಚೆಲುವಾಂಬ ಆಸ್ಪತ್ರೆಯ ಆವರಣದ ‘ಸಖಿ’ ಒನ್‌ಸ್ಟಾಪ್ ಸೆಂಟರ್‌ನಲ್ಲಿ ಗೌರವಧನ ಆಧಾರದ ಮೇರೆಗೆ ಕಾರ್ಯನಿರ್ವಹಿಸಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೇಸ್ ವರ್ಕರ್/ಸಮಾಜ ಸೇವಕರ (ಹುದ್ದೆ 01) ಬಿಎಸ್‌ಡಬ್ಲೂ , ಸಮಾಜಶಾಸ್ತ್ರ/ಮಹಿಳಾ ಅಧ್ಯಯನದಲ್ಲಿ ಪದವೀಧರರಗಿರಬೇಕು. ಕಾನೂನುಬದ್ಧ ಸಿಬ್ಬಂದಿ/ವಕೀಲ ಹುದ್ದೆಗೆ(01) ಕಾನೂನು ಪದವಿ ಯನ್ನು ಹೊಂದಿರಬೇಕು. ಜೊತೆಗೆ ಹುದ್ದೆಗೆ ಮೇಲೆ ನಿಗದಿಪಡಿಸಿದ ಯಾವುದಾದರೊಂದು ವಿಷಯದಲ್ಲಿ ಪದವಿಯನ್ನು ಕರ್ನಾಟಕದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಪದವಿಯಲ್ಲಿ ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೇಲ್ಕಂಡ ಹುದ್ದೆಗಳಿಗೆ ನಿಗದಿಪಡಿಸಿದ ಅವದಿಯ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಕಂಪ್ಯೂಟರ್ ಜ್ಞಾನಹೊಂದಿರುವುದು ಕಡ್ಡಾಯವಾಗಿರುತ್ತದೆ. ಮೇಲ್ಕಂಡ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕ ಹಾಗೂ ಗೌರವಧನ ಆಧಾರಿತ ಹುದ್ದೆಯಾಗಿದ್ದು, ಸಕ್ರಮಗೊಳ್ಳಲು ಅವಕಾಶವಿರುವುದಿಲ್ಲ. ಮೇಲ್ಕಂಡ ಗೌರವಧನ ಆಧಾರಿತ ಹುದ್ದೆಗಳಿಗಾಗಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಮಹಿಳಾ ಅಭಿವೃದ್ದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹಾಗೂ ತರಬೇತಿ ಹಾಗೂ ಸೇವಾ ಮನೋಭಾವನೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು 24*7 ಗಂಟೆಯ ಪಾಳಿಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿಸಿದ ಲಗತ್ತುಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 1ನೇ ಮಹಡಿ, ಸ್ತಿ ಶಕ್ತಿ ಭವನ, ಕೃಷ್ಣದೇವರಾಯ ವೃತ್ತ, ವಿಜಯನಗರ, 2ನೇ ಹಂತ, ಮೈಸೂರು-17 ಇವರಿಗೆ ಆಗಸ್ಟ್ 25 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2495432 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: