ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೋಕಿಯೋ ಒಲಂಪಿಕ್ : ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ ಹಾಕಿ ಪುರುಷರ ತಂಡ

ವಿದೇಶ( ಟೋಕಿಯೊ)ಆ.1:-   ಭಾರತ ಹಾಕಿ ಪುರುಷರ ತಂಡ ಟೋಕಿಯೊ ಒಲಂಪಿಕ್ಸ್ ನಲ್ಲಿ  ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದು ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಇಂದು ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಕಿ ಪುರುಷರ ತಂಡ 3-1 ಗೋಲುಗಳಿಂದ ಗೆಲುವು ಸಾಧಿಸಿದೆ.

ದಿಲ್‌ಪ್ರೀತ್ ಸಿಂಗ್(7ನೇ ನಿಮಿಷ), ಗುರ್ಜಂತ್ ಸಿಂಗ್ (16ನೇ) ಮತ್ತು ಹಾರ್ದಿಕ್ ಸಿಂಗ್ (57ನೇ) ಮೂಲಕ ಭಾರತವು ಮೂರು ಗೋಲುಗಳನ್ನು ಗಳಿಸಿ ಎಂಟು ಬಾರಿ ಒಲಂಪಿಕ್ಸ್ ಚಾಂಪಿಯನ್‌ ತಂಡ ಮತ್ತೊಂದು ಪದಕದ ಭರವಸೆ ಮೂಡಿಸಿದೆ.

ಈ ಮೂಲಕ 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಒಲಂಪಿಕ್ಸ್ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: