ಮೈಸೂರು

ಕೃತಿ ಬಿಡುಗಡೆ ಕುರಿತು ಪೂರ್ವಭಾವಿ ಸಭೆ

ಮೈಸೂರು,ಆ.1:- ಹಿರಿಯ ಸಾಹಿತಿ ಮತ್ತು ಮಾಧ್ಯಮ ಸಂಪಾದಕರಾದ ಬಸವರಾಜು ಮೆಗಲಕೇರಿಯವರಿಂದ ರಚಿತವಾದ ನಮ್ಮ ಅರಸು ಕೃತಿ ಬಿಡುಗಡೆಯನ್ನು   11-08-2021   ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ   ಸಿದ್ದರಾಮಯ್ಯ   ಲೋಕಾರ್ಪಣೆ ಮಾಡುತ್ತಿದ್ದು ಇದರ  ಕುರಿತು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ನಗರದ ಚಾಮುಂಡಿಪುರಂ ನಲ್ಲಿರುವ ಅಪೂರ್ವ ಹೋಟೆಲ್ ನಲ್ಲಿಂದು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಮತ್ತು ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಕಾಳೇಗೌಡ ನಾಗವಾರ, ಡಾ.ಡಿ.ತಿಮ್ಮಯ್ಯ, ಕ.ಸಾ.ಪ.ಅಧ್ಯಕ್ಷರಾದ ವೈ.ಡಿ.ರಾಜಣ್ಣ,ಕ.ಸಾ.ಪ.ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ( ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಗೌರವ ಅಧ್ಯಕ್ಷರಾದ,ಎಂ.ಚಂದ್ರಶೇಖರ್, ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್,ಎಂ.ಜಿ.ಆರ್. ಅರಸ್,ಗೌರವ ಸಲಹೆಗಾರರಾದ ವಿಶ್ವನಾಥ್.ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: